ಗುಂಡ್ಲುಪೇಟೆ: ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿರುವುದರಿಂದ ಕಾಡಿನ ಅರ್ಧದಷ್ಟು ಕೆರೆಗಳು ತುಂಬಿದು ಮುಂದಿನ ಬೇಸಿಗೆಯಲ್ಲಿ ಕಾಡು ಪ್ರಾಣಿಗಳಿಗೆ ನೀರಿನ ಸಮಸ್ಯೆಯಾಗದು ಎಂದು ಬಂಡೀಪುರ ಹುಲಿ ಯೋಜನ ನಿದೇಶಕ ಎಸ್.ಆರ್.ನಟೇಶ್ ತಿಳಿಸಿದ್ದಾರೆ.
ಎರಡು ಮೂರು ವರ್ಷಕ್ಕೆ ಹಿಂದಕ್ಕೆ ಹೋಲಿಸಿದರೆ ಈ ಬಾರಿ ಅರಣ್ಯ ಇಲಾಖೆಯ ಅಧಿಕಾರಿಗಳು ತೆಗೆದುಕೊಂಡ ಮುಂಜಾಗ್ರತಾ ಕ್ರಮದಿಂದಾಗಿ ನೀರಿನ ಸಮಸ್ಯೆಗಳು ಉದ್ಭವಿಸಿಲ್ಲ. ಜತೆಗೆ ಈ ವ್ಯಾಪ್ತಿಯಲ್ಲಿ ಸ್ವಲ್ಪ ಮಟ್ಟಿಗೆ ಮಳೆ ಬಂದಿರುವುದರಿಂದಾಗಿ ಕೆರೆಕಟ್ಟೆಗಳು ಒಣಗದೆ ಪ್ರಾಣಿಗಳಿಗೆ ನೀರು ದೊರೆಯುವಂತಾಗಿದೆ ಎಂದರು.
ಫೆಬ್ರವರಿ ,ಮಾರ್ಚ್ ತಿಂಗಳ ವೇಳೆಯಲ್ಲಿಯೇ ಕೆರೆಗಳು ಬರಿದಾಗುತ್ತಿರುವುದನ್ನು ಅರಿತು ವನ್ಯಜೀವಿಗಳಿಗೆ ನೀರಿನ ದಾಹ ನೀಗಿಸಲು ಅರಣ್ಯ ಇಲಾಖೆಯು ಸೋಲಾರ್ ಮೋಟಾರ್ ಮುಖಾಂತರ ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ಮಾಡಿದ್ದರಿಂದ ಅರಣ್ಯದಲ್ಲಿ ನೀರಿನ ಸಮಸ್ಯೆ ಅಷ್ಟಾಗಿ ಕಾಣಿಸಿಲ್ಲ ಎಂದು ನಟೇಶ್ ಹೇಳಿದರು.
ಬಂಡೀಪುರ ವ್ಯಾಪ್ತಿಯ ಎಲ್ಲ ವಲಯಗಳಲ್ಲಿ ಸುಮಾರು 350 ಕೆರೆಗಳಿವೆ. ಈಗಾಗಲೇ 180 ಕೆರೆಗಳಲ್ಲಿ ನೀರು ತುಂಬಿದೆ 2020 ನವೆಂಬರ್ ಮತ್ತು ಡಿಸೆಂಬರ್ರಲ್ಲಿ ಉತ್ತಮ ಮಳೆಯಾದ್ದರಿಂದ ಕೆರೆಗಳು ನೀರಿನಿಂದ ಭರ್ತಿಯಾಗಿವೆ, ಈಗಾಗಲೇ ಬಂಡೀಪುರ ವಲಯದ ನೀಲಕಂಠರಾವ್ ಕೆರೆ, ಸೊಳ್ಳೀಕಟ್ಟೆ ಕೆರೆ, ಕುಂದಕೆರೆ ವಲಯದ ಮಾಲಗಟ್ಟೆ, ಕಡಬೂರು ಕಟ್ಟೆ, ದೇವರಮಡು, ಮೊಳೆಯೂರು ವಲಯದ ಹುರುಳಿಪುರ ಕೆರೆ, ಎನ್ .ಬೇಗೂರು ದೊಡ್ಡಮುತ್ತಿಗೆ ಕೆರೆಗಳಿಗೆ ಸೋಲಾರ್ ಮುಖಾಂತರ ನೀರು ತುಂಬಿವೆ ಮುಂದಿನ ದಿನಗಳಲ್ಲಿ ಮಳೆ ಬಂದರೆ ಅರಣ್ಯದಲ್ಲಿರುವ ಪ್ರಾಣಿಗಳಿಗೆ ಯಾವುದೇ ರೀತಿಯ ನೀರು ಸಮಸ್ಯೆ ಇಲ್ಲ ಮತ್ತು ಆಹಾರಕ್ಕೆ ಸಮಸ್ಯೆ ಕಾಣಿ ಹಿಂತಿರುಗುತ್ತಿದ್ದರು. ಆದರೆ ಈ ಬಾರಿ ಆ ರೀತಿಯ ಸಮಸ್ಯೆಯಾಗಿಲ್ಲ ನೀರು ಮತ್ತು ಆಹಾರಕ್ಕೆ ಕೊರತೆಯಾಗದ ಕಾರಣ ಪ್ರಾಣಿಗಳು ಇಲ್ಲಿಯೇ ಉಳಿದು ಪ್ರಾಣಿಪ್ರಿಯರ ಗಮನಸೆಳೆಯುತ್ತಿವೆ ಎಂದರು.
ಎಲ್ಲಾ ಕೆರೆಗಳಲ್ಲಿ ನೀರು ಇರುವುದರಿಂದ ಸಫಾರಿಯಲ್ಲಿ ಪ್ರಾಣಿಗಳ ದರ್ಶನವಾಗುತ್ತಿವೆ ಕೆರಗಳ ಬಳಿ ಆನೆಗಳು, ಜಿಂಕೆ ಹುಲಿ ಗಳು, ಕಾಡ್ಮೆಮೆ,ಹಾಗೂ ಚಿರತೆಗಳು ಹೆಚ್ಚಾಗಿ ಕಂಡು ಬರುತ್ತಿವೆ ಎಂಬ ಮಾಹಿತಿ ನೀಡಿದರು.