ಬಾಗಲಕೋಟೆ ಯೋಧ ನಿಧನ

ಬಾಗಲಕೋಟೆ ಯೋಧ ನಿಧನ

ಬಾಗಲಕೋಟೆ, ಜು. 24 : ಅನಾರೋಗ್ಯದಿಂದ ಬಳಲುತ್ತಿದ್ದ ಬಾಗಲಕೋಟೆ ಜಿಲ್ಲೆಯ ಸಿಆರ್ಪಿಎಫ್ ಯೋಧರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಒಡಿಶಾದ ಮಿಲಿಟರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ರಂಗಪ್ಪ ಬಿಮಪ್ಪ ಬಡಿಗೇರ್ (39) ನಿಧನ ಯೋಧ. ರಂಗಪ್ಪ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಹಿರೇಬೂದಿಹಾಳ ಗ್ರಾಮದವರು. ಸಿಆರ್ಪಿಎಫ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಯೋಧ ರಂಗಪ್ಪ ಅವರು ಕಳೆದ 19 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪ್ರಸ್ತುತ ಒಡಿಶಾದ 4ನೇ ಬಟಾಲಿಯನ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ರಂಗಪ್ಪ ಅವರನ್ನು ಒಡಿಶಾದ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು.
ಆದರೆ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ರಂಗಪ್ಪ ನಿಧನರಾಗಿದ್ದಾರೆ. ರಂಗಪ್ಪ ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದು ಇಂದು ಅವರ ಅಂತ್ಯಸಂಸ್ಕಾರ ಹಿರೆಬೂದಿಹಾಳ ಗ್ರಾಮದಲ್ಲಿ ಸರ್ಕಾರಿ ಸಕಲ ಗೌರವದೊಂದಿಗೆ ನಡೆಯಲಿದೆ.

ಫ್ರೆಶ್ ನ್ಯೂಸ್

Latest Posts

Featured Videos