ದೇವರನಾಡಿಗೆ ದೇವೇಗೌಡ್ರು

ದೇವರನಾಡಿಗೆ ದೇವೇಗೌಡ್ರು

ಬೆಂಗಳೂರು, ಡಿ. 19 : ವಿಶ್ವದ ಬೇರೆ ಯಾವುದೇ ಸ್ಥಳಗಳಿಗೆ ಹೋಲಿಸಿದರೆ ಕೇರಳವು ಅತಿ ಹೆಚ್ಚು ಆಯುರ್ವೇದ ವೈದ್ಯರನ್ನು ಹೊಂದಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇಂದಿನಿಂದ ಹತ್ತು ದಿನಗಳ ಕಾಲ ಆಯುರ್ವೇದ ಚಿಕಿತ್ಸೆ ಪಡೆಯಲಿದ್ದಾರೆ.
ಕೇರಳದ ಕ್ಯಾಲಿಕಟ್ ಬಳಿ ಇರುವ ಆಯುರ್ವೇದ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಧಾನಸಭೆ ಉಪ ಚುನಾವಣೆ ಪ್ರಚಾರ ಮುಗಿದ ನಂತರ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದೆ ಗೌಡರು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ಈಗ ಕೇರಳದಲ್ಲಿ ಹತ್ತು ದಿನಗಳ ಕಾಲ ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚೆಗೆ ಪಡುಬಿದ್ರಿ ಬಳಿ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಗೌಡರು ಚಿಕಿತ್ಸೆ ಪಡೆದಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos