ಬೆಂಗಳೂರು, ಅ. 11: ನಗರದಲ್ಲಿ ಇಂದು ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಜಿಲ್ಲಾ ಪಂಚಾಯತಿ ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ವತಿಯಿಂದ ಹೆಣ್ಣುಭ್ರೂಣಹತ್ಯೆ ತಡೆಗಟ್ಟುವ ಬಗ್ಗೆ ಅರಿವು ಮೂಡಿಸಲು ಜಾಥಾ ಕಾರ್ಯಕ್ರಮವನ್ನು ಭಾರತೀಯ ವೈದ್ಯಕೀಯ ಸಂಘ ಮತ್ತು ಇಂಡಿಯನ್ ರೇಡಿಯಾಲಜಿಸ್ಟ್ ಅಸೋಸಿಯೇಷನ್ ರವರ ಸಹಯೋಗದೊಡನೆ ನಡೆಸಲಾಯಿತು.
ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ ಶ್ರೀನಿವಾಸ್ ರವರು, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾಕ್ಟರ್ ಹರೀಶ್ವರ ಮತ್ತು ಉಪ ನಿರ್ದೇಶಕರಾದ ಡಾಕ್ಟರ್ ಮಮತಾ ರವರು ಚಾಲನೆ ನೀಡಿದರು.