ಆತ್ಮಹತ್ಯೆಗೆ ಯತ್ನ

ಆತ್ಮಹತ್ಯೆಗೆ ಯತ್ನ

ಹುಬ್ಬಳ್ಳಿ ,ಜ. 29: ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬ ಕಿಮ್ಸ್ ಆಸ್ಪತ್ರೆಯ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ಬೆಳಿಗ್ಗೆ ಕಿಮ್ಸ್ ಆವರಣದಲ್ಲಿ ನಡೆದಿದೆ.

ಮಲ್ಲೇಶಪ್ಪ ಚನ್ನಪ್ಪ ಕಳಲಿ(30)ಎಂಬುವವರೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದಾನೆ. ಹಾನಗಲ್ ತಾಲೂಕಿನ ಗಡೆಯಂಕನಹಳ್ಳಿ ಗ್ರಾಮದವರಾದ ಮಲ್ಲೇಶಪ್ಪ ಕಳೆದ ಮೂರು ದಿನಗಳ ಹಿಂದೆ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಇತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೇ ಮಲ್ಲೇಶಪ್ಪ ಇಂದು ಬೆಳಿಗ್ಗೆ ಕಿಮ್ಸ್ ಕಟ್ಟಡ ಎರಡನೇ ಮಹಡಿಯ ಬಾಲ್ಕನಿಯಿಂದ ಜಿಗಿಯುವುದಾಗಿ ಹೈ ಡ್ರಾಮಾ ಸೃಷ್ಟಿಸಿದ್ದ ಕೊನೆಗೆ ಕಿಮ್ಸ್ ಸಿಬ್ಬಂದಿಗಳು ಆತನನ್ನು ಮನವೊಲಿಸಿ ರಕ್ಷಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos