ಸಿಬಿಐ ಮುಖ್ಯಸ್ಥರಾಗಿ ರಿಷಿ ಕುಮಾರ್ ಶುಕ್ಲಾ ಅಧಿಕಾರ ಸ್ವೀಕಾರ

ಸಿಬಿಐ ಮುಖ್ಯಸ್ಥರಾಗಿ ರಿಷಿ ಕುಮಾರ್ ಶುಕ್ಲಾ ಅಧಿಕಾರ ಸ್ವೀಕಾರ

ನವದೆಹಲಿ: ನೂತನ ಸಿಬಿಐ ಮುಖ್ಯಸ್ಥ ರಿಷಿ ಕುಮಾರ್ ಶುಕ್ಲಾ ಸೋಮವಾರ ತನ್ನ ಹುದ್ದೆಯನ್ನು ವಹಿಸಿಕೊಂಡಿದ್ದಾರೆ.

1983ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಶುಕ್ಲಾ ಅವರು ಕೋಲ್ಕತಾ ಪೊಲೀಸರೊಂದಿಗೆ ಸಿಬಿಐ ಜಟಾಪಟಿ ನಡೆಸುತ್ತಿರುವ ವೇಳೆಯೇ ಅಧಿಕಾರ ಸ್ವೀಕರಿಸಿದ್ದಾರೆ.

ಮಧ್ಯಪ್ರದೇಶ ಪೊಲೀಸ್‌ನ ಮಾಜಿ ಡಿಜಿಪಿ 58ರ ಹರೆಯದ ಶುಕ್ಲಾ ಪೂರ್ಣಕಾಲಿಕ ಸಿಬಿಐ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಸಿಬಿಐ ಪಶ್ಚಿಮಬಂಗಾಳ ಸರಕಾರದ ಕ್ರಮ ಪ್ರಶ್ನಿಸಿ ಸುಪ್ರೀಂಕೋರ್ಟಿನ ಮೆಟ್ಟಿಲೇರಿದೆ. ಈ ವೇಳೆ ಶುಕ್ಲಾ ಕೆಲವು ಆದೇಶ ಹೊರಡಿಸುವ ಸಾಧ್ಯತೆಯಿದೆ.

ಫ್ರೆಶ್ ನ್ಯೂಸ್

Latest Posts

Featured Videos