ಆಸ್ತಿ ವಿಚಾರಕ್ಕೆ ತಾಯಿಯನ್ನೆ ಕೊಂದ ಮಗ

ಆಸ್ತಿ ವಿಚಾರಕ್ಕೆ ತಾಯಿಯನ್ನೆ ಕೊಂದ ಮಗ

ಬೀದರ್, ಅ. 2 : ಹೆತ್ತ ತಾಯಿ ನಾವು ಹುಟ್ಟಿದಾಗಿನಿಂದ – ಸಾಯುವವರೆಗೂ.. ನಮ್ಮನ್ನು ಸಾಕಿ-ಸಲಹುತ್ತಾಳೆ. ಅವಳ ಪ್ರೀತಿ ಅನಂತ-ಅನನ್ಯ. ಇಲ್ಲೊಬ್ಬ ಧೂರ್ತ ಮಗ ಹೆತ್ತತಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇಂಥದ್ದೊಂದು ಹೀನ ಕೃತ್ಯ ಭಾಲ್ಕಿ ತಾಲೂಕಿನ ಕೋನಮೆಳಕುಂದಾ ಗ್ರಾಮದಲ್ಲಿ ನಡೆದಿದೆ.
ಗೋದಾವರಿ ಬಾಬುರಾವ್ (55) ಹತ್ಯೆ ಮಹಿಳೆ. ಮಗ ಸಂಜುಕುಮಾರ್ ಬಾಬುರಾವ್ನನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ ರಾತ್ರಿ ತಾಯಿ-ಮಗನ ನಡುವೆ ಆಸ್ತಿ ವಿಚಾರಕ್ಕೆ ಜಗಳವಾಗಿತ್ತು. ಬಳಿಕ ತಾಯಿಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಧನ್ನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos