ಇಟಾನಗರ, ಮೇ. 11, ನ್ಯೂಸ್ ಎಕ್ಸ್ ಪ್ರೆಸ್: ಮತ್ತು ಕಂದು ಬಣ್ಣದ ಹಾವು ಅರುಣಾಚಲ ಪ್ರದೇಶದಲ್ಲಿ ಕಂಡುಬಂದಿದೆ. ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯಲ್ಲಿ ಹೊಸ ಪ್ರಭೇದದ ವಿಷಪೂರಿತ ಕೆಂಪು ಮತ್ತು ಕಂದು ಬಣ್ಣದು ಗುಳಿ ಮಂಡಲ ಹಾವನ್ನು(ಪಿಟ್ ವೈಪರ್) ಕಮೆಂಗ್ ಜಿಲ್ಲೆಯ ಅರಣ್ಯದಲ್ಲಿ ಅಶೋಕ್ ಕ್ಯಾಷ್ಟನ್ ನೇತೃತ್ವದ ಉರಗ ತಜ್ಞರು ಪತ್ತೆ ಹಚ್ಚಿದ್ದಾರೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಈವರೆಗೆ ನಾಲ್ಕು ವಿಧದ ಮಂಡಲ ಹಾವುಗಳಿದ್ದವು.ಮಲಬಾರ್, ಹಪ್ಪಟೆ, ಕುದುರೆಲಾಳ ಮಂಡಲ ಹಾವು ಹಾಗೂ ಹಿಮಾಲಯ ಮಂಡಲ ಹಾವುಗಳಿದ್ದವು.ಈಗ ಕೆಂಪು ಕಂದು ಮಂಡಲ ಹಾವು ಕಂಡು ಬಂದಿದೆ. ಸದ್ಯ ಕೇವಲ ಒಂದು ಗಂಡು ಹಾವು ಕಂಡು ಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಶೋಧ ನಡೆಯಬೇಕಿದೆ ಎಂದು ಅಶೋಕ್ ಕ್ಯಾಪ್ಟನ್ ಹೇಳಿದ್ದಾರೆ.