ಸಿಗರೇಟ್ ನಲ್ಲಿ ಗಾಂಜಾ ರೌಡಿಯ ಬಂಧನ

ಸಿಗರೇಟ್ ನಲ್ಲಿ ಗಾಂಜಾ ರೌಡಿಯ ಬಂಧನ

ಬೆಂಗಳೂರು, ನ. 11: ಸಿಗರೇಟ್ಗಳಲ್ಲಿ ಗಾಂಜಾ ತುಂಬಿಸಿ ಮಾರಾಟ ಮಾಡುತ್ತಿದ್ದ  ಎಲ್ಬಿಎಸ್ ನಗರದ ಸದ್ದಾಂ ಹುಸೇನ್ ಅಲಿ ಯಾಸ್ ಸದ್ದಾಂ ಹಾಗೂ ಕಾಡುಗೋಡಿಯ ಅಜಂಪಾಷ ಸಿಕ್ಕಿಬಿದ್ದಿದ್ದು, ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿರುವ ಮತ್ತೊಬ್ಬ ಆರೋಪಿ ಇಮ್ರಾನ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಇಸ್ಲಾಂಪುರ ಸಮೀಪದ ಎಲ್ಬಿಎಸ್ ನಗರದಲ್ಲಿ ಗಾಂಜಾ ದಂಧೆ  ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದಾಗ ರೌಡಿಶೀಟರ್ಗಳು ಬಲೆಗೆ ಬಿದ್ದಿದ್ದಾರೆ. ಸಿಗರೆ ಟ್ನ ಲ್ಲಿ ಹೊಗೆಸೊಪ್ಪು ತೆಗೆದು ಅದಕ್ಕೆ ಗಾಂಜಾ ಪುಡಿ ತುಂಬಿ ಆರೋಪಿಗಳು ಮಾರಾಟ ಮಾಡುತ್ತಿದ್ದರು. ಆರೋಪಿಗಳಿಂದ ₹7 ಲಕ್ಷ ಮೌಲ್ಯದ 15 ಕೆ.ಜಿ. ಗಾಂಜಾ ಹಾಗೂ ಕಾರು ಜಪ್ತಿ ಮಾಡಲಾಗಿದೆ.

 

 

 

ಫ್ರೆಶ್ ನ್ಯೂಸ್

Latest Posts

Featured Videos