ಸುದ್ದಿ ಪಾವಗಡ, ಡಿ. 19: ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಆರೋಪಗಳನ್ನು ಪಾವಗಡ ತಾಲೂಕಿನ ತಿರುಮಣಿ ಪೊಲೀಸರು ಬಂಧಿಸಿದ್ದಾರೆ.
ಮನೆ ಮುಂದೆ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಆಂಧ್ರ ಪ್ರದೇಶಗಳಿಗೆ ಕೊಂಡೊಯ್ದು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆಂಧ್ರಪ್ರದೇಶದ ಕೊಟ್ಲಪಲ್ಲಿ ನಿವಾಸಿ ಮೆಕಾನಿಕ್ ಬಾಲು ಅಲಿಯಾಸ್ ರವಿ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ತಿರುಮಣಿ ವೃತ್ತದ ಇನ್ಸ್ ಪೆಕ್ಟರ್ ಶ್ರೀ ಶೈಲ ಮೂರ್ತಿ ನೇತೃದಲ್ಲಿ ತನಿಖೆ ಆರಂಭಿಸಿ ಯಶಸ್ವಿಯಾಗಿ ಆರೋಪಿಯನ್ನು ಬಂಧಿಸಿದ್ದಾರೆ.