ಬೆಂಗಳೂರು: ಮದ್ದೂರು ನಗರದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಗುಂಪುಗಳ ಮಧ್ಯೆ ಗಲಾಟೆ ನಡೆದು ಕಲ್ಲು ತೂರಾಟ ನಡೆದು ಹಲವರಿಗೆ ಗಾಯಗಳಾಗಿದ್ದು, ಈ ಕುರಿತು ಇದೀಗ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ನಗರದಲ್ಲಿ ಇಂದು (ಸೋಮವಾರ ಸೆ. 08) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮದ್ದೂರಿನಲ್ಲಿ ನಡೆದ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಕಲ್ಲು ತೂರಾಟ ಘಟನೆಗೆ ನೇರ ರಾಜ್ಯ ಕಾಂಗ್ರೆಸ್ ಸರ್ಕಾರವೇ ಹೊಣೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಚಂದ್ರಗ್ರಹಣ: ಆಕಾಶದಲ್ಲಿ ವಿಸ್ಮಯ ಕಂಡ ಜನತೆ
ಇಷ್ಟು ದಿನ ಧರ್ಮಸ್ಥಳ ಆಯ್ತು, ಚಾಮುಂಡೇಶ್ವರಿ ಆಯ್ತು, ಈಗ ಮದ್ದೂರು. ಮದ್ದೂರು ಕಲ್ಲೆಸೆತ ಮತ್ತು ಲಾಠಿಚಾರ್ಜ್ ಹೇಯಕೃತ್ಯ. ಕಲ್ಲೆಸೆತಕ್ಕೆ ಸರ್ಕಾರದ ಕುಮ್ಮಕ್ಕಿದೆ. ಈ ಘಟನೆಗೆ ನೇರ ಕಾರಣ ಪೊಲೀಸ್ ಅವರು ಅಲ್ಲ, ಸರ್ಕಾರದ ಕುಮ್ಮಕ್ಕಿಲ್ಲದೇ ಈ ಘಟನೆಗಳು ನಡೆಯುತ್ತಿರಲಿಲ್ಲ. ನಾವು ಪಾಕಿಸ್ತಾನದಲ್ಲಿದ್ದೀವೋ ಕರ್ನಾಟಕದಲ್ಲಿದ್ದೀವೋ ಎಂಬ ಭ್ರಮೆ ಮೂಡುತ್ತಿದೆ. ತಿಮರೋಡಿ ಗ್ಯಾಂಗ್ ಸಿದ್ದರಾಮಯ್ಯನ ಸುತ್ತ ಸುತ್ತಿಕೊಂಡಿದ್ದಾರೆ. ಗಣಪತಿ ವಿಸರ್ಜನೆ ಮಾಡುವುದು ಸಾರ್ವಜನಿಕ ರಸ್ತೆ. ಇವರ ಅಪ್ಪನ ಆಸ್ತಿನಾ? ನಾವು ಟ್ಯಾಕ್ಸ್ ಕೊಟ್ಟಿರುವುದು. ಇವರ ಯೋಗ್ಯತೆಗೆ ಅಲ್ಲಿ ಒಂದು ಮೀಸಲು ಪಡೆ ಇಟ್ಟಿದ್ದರೆ ಲಾಠಿ ಚಾರ್ಜ್ ಅವಶ್ಯಕತೆ ಇತ್ತಾ? ಹಿಂದೂಗಳ ಮೇಲೆ ಲಾಠಿ ಚಾರ್ಜ್, ದುಷ್ಕರ್ಮಿಗಳಿಗೆ ಯಾಕೆ ಬಡಿದಿಲ್ಲ? ಕಲ್ಲು ಎಸೆದವರಿಗೆ ಯಾಕೆ ಬಡಿದಿಲ್ಲ? ಈ ತರಹ ಗೂಂಡಾಗಳು ಮಸೀದಿಯಲ್ಲಿ ಇರುತ್ತಾರೆ ಅಂತಾ ನಿಮಗೆ ಜ್ಞಾನ ಬೇಡವೇ. ಮದ್ದೂರು ಘಟನೆಗೆ ಸಿಎಂ, ಡಿಸಿಎಂ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.