ಬೆಳಗಾವಿ, ಆ. 12 : ಮಳೆ ಯಿಂದ ನೀರಿನಲ್ಲಿ ಮುಳುಗಿಸಿ ಜನಜೀವನ ಅಪಾಯಕ್ಕೆ ಸಿಲುಕಿದೆ. ಇನ್ನೊಂದಡೆ ಭೂ ಮಂಡಲದಲ್ಲಿ ನೆಲೆಸಿರುವ ಪ್ರತಿಯೊಬ್ಬರಿಗೂ ಆಹಾರ ದೊರಕುತ್ತಿಲ್ಲ.ಮೂಕ ಪ್ರಾಣಿಗಳುಗೂ ಆಹಾರ ವೇದನೆ ಇದೆ. ಹಸಿವಿನಿಂದ ಬಳಲಿದ್ದ ಬೀದಿ ನಾಯಿಗಳು ಮಗುವಿನ ಮೇಲೆ ದಾಳಿಮಾಡಿರುವ ಘಟನೆ ಬೆಳಗಾವಿ ತಿಲಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಗಂಭೀರ ಗಾಯಗೊಂಡ ಪಾರ್ಥ ಪರುಶುರಾಮ್ (5) ವರ್ಷದ ಮಗು. ಕೂಡಲೇ ಬಾಲಕನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತದೆ. ಇಂದು ಬೆಳಗ್ಗೆ ಲೇಲೆ ಮೈದಾನದಲ್ಲಿ ಮೂರು ನಾಯಿಗಳು ಮಗುವಿನ ಮೇಲೆ ದಾಳಿ ಮಾಡಿದ್ದು, ಮಗುವಿನ ಮುಖ ಸೇರಿ ಎಲ್ಲೆಂದರಲ್ಲೇ ಕಚ್ಚಿ ಹಾಕಿವೆ. ಹೀಗೆ ಪದೇ ಪದೇ ನಾಯಿಗಳು ದಾಳಿಮಾಡುತ್ತಿರುವ ಕಾರಣ ಮಕ್ಕಳ ಪೋಷಕರು ಭಯದ ವಾತಾವರಣದಲ್ಲಿಯೇ ಜೀವನ ನಡೆಸುತ್ತಿದ್ದಾರೆ.