ಬೆಳಗಾವಿ, ಅ. 16: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಹಾರಾಷ್ಟ್ರ ಚುನಾವಣೆ ಪ್ರಚಾರಕ್ಕೆ ತೆರಳಲು ಹೆಲಿಕಾಪ್ಟರ್ ಬಾರದ ಕಾರಣ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಅಧಿಕಾರಿಗಳ ಮೇಲೆ ಸಿಡಿಮಿಡಿಗೊಂಡ ಪ್ರಸಂಗ ಇಂದು ಬೆಳಗಾವಿಯಲ್ಲಿ ನಡೆಯಿತು.
ಪೂರ್ವ ನಿಗದಿಯಂತೆ ಸಿಎಂ ಯಡಿಯೂರಪ್ಪ ಬೆಳಿಗ್ಗೆ 8.50 ಕ್ಕೆ ಮಹಾರಾಷ್ಟ್ರದ ಜತ್ ಗರ ಚುನಾವಣಾ ಪ್ರಚಾರಕ್ಕೆ ತೆರಳಬೇಕಿತ್ತು. ಆದರೆ ಮಹಾರಾಷ್ಟ್ರ ದಿಂದ ಬರಬೇಕಿದ್ದ ಹೆಲಿಕಾಪ್ಟರ್ 11 ಗಂಟೆಯಾದರೂ ಬರಲಿಲ್ಲ. ಇದರಿಂದ ಅಸಮಾಧಾನ ಗೊಂಡ ಮುಖ್ಯಮಂತ್ರಿಗಳು ಲಕ್ಷ್ಮಣ ಸವದಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ಈಗಾಗಲೇ ಬಹಳ ತಡವಾಯಿತು. ಅಲ್ಲಿಗೆ ಬಂದು ಏನು ಮಾಡಲಿ. ಬೆಂಗಳೂರಿಗೆ ಮರಳಿ ಹೋಗುತ್ತೇನೆ ಎಂದು ಹೇಳಿದರು.