ನವದೆಹಲಿ,ಮೇ.10,ನ್ಯೂಸ್ ಎಕ್ಸ್ ಪ್ರೆಸ್ : ಲೋಕಸಭಾ ಚುನಾವಣೆಗಳ ಬಳಿಕ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಮಿತ್ ಶಾ ಗೃಹ ಸಚಿವರಾಗುತ್ತಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭವಿಷ್ಯ ನುಡಿದಿದ್ದಾರೆ.
‘ಅಮಿತ್ ಶಾ ಗೃಹ ಸಚಿವರಾದರೆ ಈ ದೇಶದ ಗತಿ ಏನಾದೀತು ಎಂಬುದನ್ನು ಮತದಾರರು ಚಿಂತಿಸಬೇಕು; ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಮರಳಿದರೆ ಮಾಜಿ ಆರ್ಥಿಕ ಸಲಹೆಗಾರ ಅರವಿಂದ ವೀರಮಣಿ ಮತ್ತು ಮಾಜಿ ಆರ್‌ಬಿಐ ಗವರ್ನರ್ ಬಿಮಲ್ ಜಲಾನ್ ಅವರು ಅರ್ಥ ಸಚಿವರಾಗಲು ಯೋಗ್ಯರಿದ್ದಾರೆ ಎಂದೂ ಕೇಜ್ರಿವಾಲ್ ಹೇಳಿದ್ದಾರೆ. ಮೇ 12ರಂದು ಆರನೇ ಹಂತದ ಲೋಕಸಭಾ ಚುನಾವಣೆ ದಿಲ್ಲಿಯಲ್ಲಿ ಮತದಾನ ನಡೆಯಲಿದೆ.