ಸಮಾನತೆ ಹಕ್ಕು ಸಾರಿದ ಅಂಬೇಡ್ಕರ್

  • In State
  • February 22, 2021
  • 272 Views
ಸಮಾನತೆ ಹಕ್ಕು ಸಾರಿದ ಅಂಬೇಡ್ಕರ್

ಬರಗೂರು: ಹೆಣ್ಣು ಮಕ್ಕಳಿಗೆ ಸಮಾನತೆಯ ಹಕ್ಕು ನೀಡಿದ ಕೀರ್ತಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ರಚಿಸಿ ಸಂವಿಧಾನಕ್ಕೆ ಸಲ್ಲುತ್ತದೆ ಎಂದು ಕೋಡಿಹಳ್ಳಿ ಶ್ರೀಆದಿಜಾಂಬವ ಬೃಹ್ಮಠದ ಪೀಠಾಧ್ಯಕ್ಷ ಶ್ರೀಮಾರ್ಕಂಡೇಯಮುನಿ ಸ್ವಾಮಿಜಿ ಹೇಳಿದರು.

ಅವರು ಶಿರಾ ತಾಲೂಕು ಹುಲಿಕುಂಟೆ ಹೋಬಳಿಯ ದ್ವಾರನಕುಂಟೆ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಶಾಖೆ ಕರ್ನಾಟಕ ಜನಜಾಗೃತಿ ಕಲಾತಂಡ (ರಿ) ಡಾ. ಜೈಭೀಮ್ ಯುವ ಸೇನೆ ದ್ವಾರನಕುಂಟೆ ಹಾಗೂ ಸಂಘಗಳು ಅಯೋಜಿಸಿದ್ದ ಮಹಾನಾಯಕ ಡಾ.ಬಿಆರ್ ಅಂಬೇಡ್ಕರ್ ದಾರವಾಹಿ ಪ್ಲೇಕ್ಸ್ ಅನಾವರಣ ಹಾಗೂ ಸಂಭ್ರಮಾಚರಣೆ ಸಮಾರಂಭದಲ್ಲಿ ದಿವ್ಯ ಸಾನ್ನೀದ್ಯ ವಹಿಸಿ ಮಾತನಾಡಿ ಡಾ.ಬಿಆರ್.ಅಂಬೇಡ್ಕರ್‌ರವರ ಆಶಾಯದಂತೆ ನಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡುವುದು ಪ್ರತಿಯೋಬ್ಬ ತಂದೆತಾಯಿ ಜಾವಾದ್ದಾರಿಯಾಗಬೇಕು ಅಜ್ಞಾನದಿಂದ ಜ್ಞಾನದ ಕಡೇ ಸಾಗಬೇಕು, ಸಮಾನತೆ ಸಾರಿದ ಬಾಬಾರ ಆದರ್ಶಗಳನ್ನು ಅನುಸರಿಸುವುದು ಅಗತ್ಯವಾಗಿ ಇಂದಿನ ಯುವ ಜನತೆ ಹೊಂದಬೇಕು ಎಂದರು.

ಫ್ರೆಶ್ ನ್ಯೂಸ್

Latest Posts

Featured Videos