ಅಲಂಕಾರಕ್ಕೆ 100 ರೂ ಪುಡಿಗಾಸು

ಅಲಂಕಾರಕ್ಕೆ 100 ರೂ ಪುಡಿಗಾಸು

ಬೆಂಗಳೂರು, ಅ. 5 : ಆಯುಧ ಪೂಜೆಯಂದು ಜನರು ತಮ್ಮ ವಾಹನ, ಆಯುಧ, ಸಲಕರಣೆ ಇತ್ಯಾದಿಗಳನ್ನು ಶುಭ್ರಗೊಳಸಿ, ಅಲಂಕರಿಸಿ ಪೂಜೆ ಮಾಡುವ ಸಂಪ್ರದಾಯವಿದೆ. ಬಿಎಂಟಿಸಿಯ ಬಸ್ಸುಗಳನ್ನೂ ಹೂವಿನಿಂದ ಅಲಂಕರಿಸಿ ಪೂಜೆ ಮಾಡಿರುವುದನ್ನ ನಾವು ನೋಡಿರುತ್ತೇವೆ. ಆದರೆ, ಈ ವರ್ಷದ ಆಯುಧ ಪೂಜೆಯಂದು, ಅಂದರೆ ಸೋಮವಾರ ನಿಮಗೆ ಈ ಪುಷ್ಪಾಲಂಕೃತ ಬಸ್ಗಳನ್ನ ನೋಡುವ ಭಾಗ್ಯ ಸಿಗುವುದು ಅನುಮಾನ. ಯಾಕೆಂದರೆ, ಆಯುಧಪೂಜೆಯ ಖರ್ಚಿಗಾಗಿ ಬಿಎಂಟಿಸಿ ತೀರಾ ಪುಡಿಗಾಸು ಬಿಡುಗಡೆ ಮಾಡಿದೆ.

ಬೇಡದ ಕಾರ್ಯಕ್ರಮಗಳನ್ನ ಹಮ್ಮಿಕೊಂಡು ಅನಗತ್ಯವಾಗಿ ಲಕ್ಷಾಂತರ, ಕೋಟ್ಯಂತರ ಹಣ ಖರ್ಚು ಮಾಡುವ ಸರ್ಕಾರ ಆಯುಧ ಪೂಜೆಯ ಖರ್ಚು ವೆಚ್ಚಕ್ಕೆ ನಗಣ್ಯ ಎನಿಸುವಷ್ಟು ಹಣ ಬಿಡುಗಡೆ ಮಾಡಿದೆ. ಪ್ರತಿಯೊಂದು ಬಸ್ಸಿನ ಸ್ವಚ್ಛತೆ, ಅಲಂಕಾರ ಮತ್ತು ಮೈಂಟೆನೆನ್ಸ್ಗೆ ಕೇವಲ 100 ರೂ ಕೊಟ್ಟಿದೆ. ಪ್ರತೀ ಒಂದು ವಿಭಾಗೀಯ ಕಾರ್ಯಾಗಾರ (ಡಿಪೋ)ಕ್ಕೆ ಕೇವಲ 1 ಸಾವಿರ ರೂ ನೀಡಿ ಕೆಎಸ್ಆರ್ಟಿಸಿ ಆಡಳಿತ ಮಂಡಳಿ ಕೈತೊಳೆದುಕೊಂಡಿದೆ.

ಫ್ರೆಶ್ ನ್ಯೂಸ್

Latest Posts

Featured Videos