ಉತ್ತರಪ್ರದೇಶ, ಮೇ, 7. ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಚುನಾವಣಾ ಪ್ರಚಾರಕ್ಕೆ ಚಿಕ್ಕ ಮಕ್ಕಳನ್ನ ಬಳಸಿಕೊಂಡಿದ್ದಾರೆ ಅಂತಾ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ.
ಉತ್ತರ ಪ್ರದೇಶದ ಬಾಲ್ರಾಂಪುರ್ ಜಿಲ್ಲೆಯ ಅಜಾಮ್ಘರ್ ಲೋಕಸಭಾ ಕ್ಷೇತ್ರದ ಎಸ್ಪಿ ಅಭ್ಯರ್ಥಿಯಾಗಿ ಅಖಿಲೇಶ್ ಯಾದವ್ ಕಣಕ್ಕಿಳಿದಿದ್ದಾರೆ. ಪ್ರಚಾರದ ವೇಳೆ ಚಿಕ್ಕ ಮಕ್ಕಳನ್ನು ಬಳಸಿಕೊಂಡು ನೀತಿ ಸಂಹಿತಿ ಉಲ್ಲಂಘಿಸಿದ್ದಾರೆ ಅಂತಾ ಉತ್ತರ ಪ್ರದೇಶದ ಬಿಜೆಪಿ ಉಪಾಧ್ಯಕ್ಷ ಜೆಪಿಎಸ್ ರಾಥೋಡ್ ರಾಜ್ಯ ಚನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.