ಕುಟುಂಬ ಸಮೇತವಾಗಿ ಫೋಟೋಶೂಟ್ ಮಾಡಿಸಿದ ನಟಿ ಐಸೂ

ಕುಟುಂಬ ಸಮೇತವಾಗಿ ಫೋಟೋಶೂಟ್ ಮಾಡಿಸಿದ ನಟಿ ಐಸೂ

ಬೆಂಗಳೂರು: ಕನ್ನಡ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಭಾರತೀಯ ನಟಿ ಅಮೂಲ್ಯ. 2000 ರ ದಶಕದ ಆರಂಭದಲ್ಲಿ ‘ಪರ್ವ’ ಚಿತ್ರದ ಮೂಲಕ ಬಾಲ ಕಲಾವಿದೆಯಾಗಿ ಪಾದಾರ್ಪಣೆ ಮಾಡಿದರು. 2007 ರಲ್ಲಿ ಚೆಲುವಿನ ಚಿತ್ತಾರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ಅಮೂಲ್ಯ 2017 ರಲ್ಲಿ ಜಗದೀಶ್ ಅವರನ್ನು ವಿವಾಹವಾದರು. ಸದ್ಯಕ್ಕೆ ಅವರಿಗೆ ಅಥರ್ವ್ ಮತ್ತು ಆದವ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಸ್ಯಾಂಡಲ್‌ವುಡ್ ಗೋಲ್ಡನ್ ಕ್ವೀನ್ ಅಮೂಲ್ಯ ಅವರು ಮತ್ತೆ ಚಿತ್ರರಂಗಕ್ಕೆ ರೀ ಎಂಟ್ರಿ ಕೊಡಲು ಸಿದ್ಧರಾಗಿದ್ದಾರೆ. ಇದರ ನಡುವೆ ತಮ್ಮ ಪತಿ ಮತ್ತು ಅವಳಿ ಮಕ್ಕಳೊಂದಿಗೆ ಮಸ್ತ್ ಆಗಿ ಫೋಟೋಶೂಟ್ ಮಾಡಿದ್ದಾರೆ.

ಅವಳಿ ರಾಜಕುಮಾರರ ಜೊತೆ ರಾಜ ಮತ್ತು ರಾಣಿಯಾಗಿ ಅಮೂಲ್ಯ ದಂಪತಿ ಮಿಂಚಿದ್ದಾರೆ. ಇಬ್ಬರು ಮಕ್ಕಳು ಬಿಳಿ ಬಣ್ಣದ ಉಡುಗೆಯಲ್ಲಿ ಮಿಂಚಿದ್ರೆ, ಅಮೂಲ್ಯ ಕೆಂಪು ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಜಗದೀಶ್ ಬಿಳಿ ಬಣ್ಣದ ಶೆರ್ವಾನಿಯಲ್ಲಿ ಕಾಣಿಸಿಕೊಂಡಿದ್ದಾರೆ.

ನಟಿಯ ಫೋಟೋಶೂಟ್‌ ನೋಡಿದ ನೆಟ್ಟಿಗರು, ಸೂಪರ್ ಫ್ಯಾಮಿಲಿ, ನಿಮ್ಮ ಕುಟುಂಬದ ಮೇಲೆ ಯಾರ ಕಣ್ಣು ಬೀಳದೆ ಇರಲಿ, ಏನ್ ವಿಶೇಷ ಐಸೂ, ತುಂಬಾ ಮುದ್ದಾಗಿದ್ದೀರಾ ಅಂತೆಲ್ಲಾ ಬಗೆ ಬಗೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos