ನವದೆಹಲಿ, ಆ. 18 : ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ (ಏಮ್ಸ್)ಯಲ್ಲಿ ಶನಿವಾರ ಅಗ್ನಿ ಅವಘಡ ಸಂಭವಿಸಿದ್ದು, ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತುರ್ತು ಚಿಕಿತ್ಸಾ ಘಟಕದ ಬಳಿ ಈ ಅವಘಡ ಘಟಿಸಿತು. ವೈದ್ಯರ ಕೊಠಡಿಗಳು ಮತ್ತು ಲ್ಯಾಬ್ಗಳು ಇರುವ ವಿಭಾಗದಲ್ಲಿ ಈ ಅವಘಡ ಸಂಭವಿಸಿದೆ.
ಯಾವುದೇ ಜೀವ ಹಾನಿ ಆಗಿಲ್ಲ. ಸ್ಥಳಕ್ಕೆ ಧಾವಿಸಿದ 34 ಅಗ್ನಿ ಶಾಮಕ ವಾಹನಗಳು ತ್ವರಿತವಾಗಿ ಬೆಂಕಿ ನಂದಿಸಿ ನಷ್ಟದ ಪ್ರಮಾಣ ತಗ್ಗಿಸಿದವು. ಆದರೂ ಸಮೀಪದ ವಾರ್ಡ್ಗಳಿಂದ ರೋಗಿಗಳನ್ನು ಸುರಕ್ಷಿತ ಕಡೆಗಳಿಗೆ ಸ್ಥಳಾಂತರಿಸುವ ಜತೆಗೆ ಕಟ್ಟಡದ ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸಲಾಯಿತು. ಈ ಅಗ್ನಿ ಅವಘಡಕ್ಕೆ ಶಾರ್ಟ್ ಸಕ್ರ್ಯೂಟ್ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.