ಬಾಂಬ್ ಸ್ಪೋಟ್

ಬಾಂಬ್ ಸ್ಪೋಟ್

ಕಾಬೂಲ್, ಆ. 18 : ವಿವಾಹ ನಡೆಯುತ್ತಿರುವಾಗಲೇ ವೆಡ್ಡಿಂಗ್ ಹಾಲ್ ನಲ್ಲಿ ಬಾಂಬ್ ಸ್ಫೋಟ ನಡೆಸಿ ಕನಿಷ್ಛ 63 ಮಂದಿಯ ಸಾವಿಗೆ ಕಾರಣರಾಗಿದ್ದಾರೆ. ಆಫ್ಘಾನಿಸ್ತಾನದ ಕಾಬೂಲ್ ನ ಪೊಲೀಸ್ ಡಿಸ್ಟ್ರಿಕ್ಟ್ 6ನಲ್ಲಿ ಈ ಭೀಕರ ದಾಳಿ ನಡೆದಿದ್ದು, ಸ್ಥಳೀಯ ಕಾಲಮಾನ ರಾತ್ರಿ 10.40ರ ಸುಮಾರಿನಲ್ಲಿ ಇಲ್ಲಿ ನಡೆಯುತ್ತಿದ್ದ ವಿವಾಹ ಸಂದರ್ಭದಲ್ಲಿ ಉಗ್ರರು ಬಾಂಬ್ ಸ್ಫೋಟ ನಡೆಸಿದ್ದಾರೆ. 63 ಮಂದಿ ಸಾವನ್ನಪ್ಪಿದ್ದು, 180ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಆಫ್ಘಾ ನ್ ಸರ್ಕಾರ ಕೂಡ ಮಾಹಿತಿ ನೀಡಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಆಫ್ಗಾನಿಸ್ತಾನದ ಆಂತರಿಕ ಸಚಿವಾಲಯದ ವಕ್ತಾರ ನುಸ್ರತ್ ರಹಿಮಿ ಹೇಳಿದ್ದಾರೆ.ಪಶ್ಚಿಮ ಅಪ್ಘಾನಿಸ್ತಾನದ ರಾಜಧಾನಿಯಲ್ಲಿ ಮದುವೆ ರಿಸಪ್ಶನ್ ವೇಳೆ ಬಾಂಬ್ ಸ್ಫೋಟ ನಡೆದಿರುವುದನ್ನು ಅಫ್ಘಾನ್ ಆಂತರಿಕ ಸಚಿವಾಲಯ ದೃಢಪಡಿಸಿದೆ. ಆದರೆ ಗಾಯಗೊಂಡವರ ನಿಖರವಾದ ಸಂಖ್ಯೆ ಇನ್ನೂ ತಿಳಿದುಬಂದಿಲ್ಲ.

ಫ್ರೆಶ್ ನ್ಯೂಸ್

Latest Posts

Featured Videos