ಹೊಸಕೋಟೆ, ಅ. 15: ಎಂಟಿಬಿ ನಾಗರಾಜ್ ನಂತರ ಇದೀಗ ಕಾಂಗ್ರೇಸ್ ನಿಂದ ಬಾಡೂಟ. ಕಾಂಗ್ರೇಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ರಿಂದ ಕ್ಷೇತ್ರದ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಭರ್ಜರಿ ಬಾಡೂಟ. ಗಿಡಪ್ಪನಹಳ್ಳಿಯ ಮಾಜಿ ಜಿಲ್ಲಾ ಪಂ ಅಧ್ಯಕ್ಷ ಪ್ರಸಾದ್ ಮನೆಯಲ್ಲಿ ಬಾಡೂಟ.
ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಾಡೂಟದ ಪಾಲಿಟಿಕ್ಸ್. ಬಾಡೂಟಕ್ಕೆ ಮುಗಿಬಿದ್ದ ನಾಯಕರು ಮತ್ತು ಮುಖಂಡರು. ಇಂದು ತಾಲೂಕಿನ ಭುವನಹಳ್ಳಿ, ಗಿಡಪ್ಪನಹಳ್ಳಿಯಲ್ಲಿ ಚುನಾವಣಾ ಪ್ರಚಾರ ನಡೆಸಿದ ಕಾಂಗ್ರೇಸ್ ಅಭ್ಯರ್ಥಿ. ಪ್ರಚಾರದ ನಂತರ ನೆರೆದಿದ್ದ ಮುಖಂಡರು ಕಾರ್ಯಕರ್ತರಿಗೆ ಮುದ್ದೆ, ಮಟನ್, ಚಿಕನ್ ನ ಭರ್ಜರಿ ಬಾಡೂಟ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಗಿಡಪ್ಪನಹಳ್ಳಿ.