ಪ್ರಾಣಾಪಾಯದಿಂದ 15 ಜನ ಪಾರು

ಪ್ರಾಣಾಪಾಯದಿಂದ 15 ಜನ ಪಾರು

ಗದಗ ,  ಅ . 12: ನರೇಗಲ್ ಮಾರ್ಗದಲ್ಲಿ ಬರುವ ಸಂಕನೂರ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಕೆಎಸ್ಆರ್ಟಿಸಿ ಬಸ್ ಪಲ್ಟಿಯಾದ ಘಟನೆ ಇಂದು ಬೆಳಗಿನ ಜಾವ ನಡೆದಿದೆ. ಈ ಘಟನೆಯಲ್ಲಿ ಸುಮಾರು 15 ಜನರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಗದಗ ಜಿಲ್ಲಾಸ್ಪತ್ರೆ ಹಾಗೂ ಹುಬ್ಬಳ್ಳಿಯ ಕಿಮ್ಸ್ಗೆ ದಾಖಲಿಸಲಾಗಿದೆ.

ಕೆಎಸ್ ಆರ್ ಟಿಸಿ ಬಸ್ ಯಾದಗಿರಿಯಿಂದ ಧಾರವಾಡ ಕಡೆಗೆ ಹೊರಟಿತ್ತು, ಈ ವೇಳೆ ಗಜೇಂದ್ರಗಡ – ನರೇಗಲ್ ಮಾರ್ಗದಲ್ಲಿ ಬರುವ ಸಂಕನೂರ ಕ್ರಾಸ್ ಬಳಿ ರಸ್ತೆ ಬದಿಗೆ ಉರುಳಿದೆ. ಕೊಪ್ಪಳ ಜಿಲ್ಲೆ ಯಲಬುರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

ಫ್ರೆಶ್ ನ್ಯೂಸ್

Latest Posts

Featured Videos