ಭ್ರಷ್ಟ ಮಧ್ಯವರ್ತಿಗಳ ಮೇಲೆ ಎಸಿಬಿ ದಾಳಿ

ಭ್ರಷ್ಟ ಮಧ್ಯವರ್ತಿಗಳ ಮೇಲೆ ಎಸಿಬಿ ದಾಳಿ

ನೆಲಮಂಗಲ, ಅ. 25: ಕೆ.ಐ.ಎ.ಡಿ.ಬಿಯಲ್ಲಿನ ಅಕ್ರಮಗಳು ಬಗೆದಷ್ಟು ಹೊರ ಬರುತ್ತಲೇ ಇವೆ. ಪ್ರಮುಖವಾಗಿ ಕೆ.ಐ.ಎ.ಡಿ.ಬಿಯಲ್ಲಿನ ಅಧಿಕಾರಿಗಳು ಹಾಗೂ ರೈತರ ಮಧ್ಯೆ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದ ಬ್ರೋಕರ್ ಗಳ ಹಾವಳಿ ಹೆಚ್ಚಾಗಿ ಇನ್ನಿಲ್ಲದಂತೆ ರೈತರಿಂದ‌ ಕಮಿಷನ್ ಹಣ ಕಿತ್ತು ತಿನ್ನುತ್ತಿದ್ದರು. ಇಂತಹ ಭ್ರಷ್ಟರ ಮೇಲೆ ಎಸಿಬಿ ದಾಳಿ ಮಾಡಿ ಚಳಿಬಿಡಿಸಿದೆ. ಎಸಿಬಿ ಡಿವೈಎಸ್ಪಿ ಬಾಲಕೃಷ್ಣ, ಇನ್ಸ್ ಪೆಕ್ಟರ್ ಗಳಾದ ಪ್ರವೀಣ್, ಶ್ಯಾಂ ಒಳಗೊಂಡು 8 ಜನ ಅಧಿಕಾರಿಗಳ ತಂಡ ಬೆಂಗಳೂರು ಹೊರವಲಯ ನೆಲಮಂಗಲ ತಾಲ್ಲೂಕಿನ ಹೊನ್ನೆನಹಳ್ಳಿ, ಹಾಗೂ ಡಾಬಸ್ಪೇಟೆಯ ನಿವಾಸಗಳ ಮೇಲೆ  ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

ದರ್ಶನ್, ಸಿದ್ದಲಿಂಗಪ್ಪ ಹೊನ್ನೇನಹಳ್ಳಿ , ರೇಣುಕೇಶ್ವರ್ ಎಡೆಹಳ್ಳಿ ಮನೆ ಮೇಲೆ ದಾಳಿ ಮಾಡಿ ಪರಿಶೀಲಿಸಿದ್ದಾರೆ.

ನಿರೀಕ್ಷಣಾ ಜಾಮೀನಿಗಾಗಿ ಕೊರ್ಟ್ ಮೊರೆ ಹೋಗಿದ್ದ ಮೂವರು ಕೂಡ ರೇಡ್ ದಿನದಿಂದಲ್ಲೂ ತಲೆ ಮರೆಸಿಕೊಂಡಿದ್ದರು. ಇನ್ನೂ ಈ ಮೂವರು ತಮ್ಮ ರಾಜಕೀಯ ಪ್ರಭಾವ ಬಳಸಿ ರೈತರಿಂದ 10%ರಿಂದ 15% ಕಮಿಷನ್ ಪಡೆದು ಪರಿಹಾರ ಕೊಡಿಸುತ್ತಿದ್ಧರು. ಈ ಅಕ್ರಮದಲ್ಲಿ ಅಧಿಕಾರಿಗಳು ಶಾಮೀಲು ಆಗಿದ್ದಾರೆ ಎಂದು ರೈತರು ಎಸಿಬಿಗೆ ದೂರು ನೀಡಿದ್ದರು.

 

 

ಫ್ರೆಶ್ ನ್ಯೂಸ್

Latest Posts

Featured Videos