‘ಆಂಬುಲೆನ್ಸ್’ ನಲ್ಲಿಯೇ ‘ಅವಳಿ ಮಕ್ಕಳ’ ಜನನ!

‘ಆಂಬುಲೆನ್ಸ್’ ನಲ್ಲಿಯೇ ‘ಅವಳಿ ಮಕ್ಕಳ’ ಜನನ!

ಬೆಂಗಳೂರು, ಮೇ. 27, ನ್ಯೂಸ್ಎಕ್ಸ್ ಪ್ರೆಸ್‍:  ಗರ್ಭಿಣಿಯನ್ನು ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದ ಸಮಯದಲ್ಲಿ ಹೆರಿಗೆ ನೋವು ಕಾಣಿಸಿಕೊಂಡು ಆ್ಯಂಬುಲೆನ್ಸ್‌ನಲ್ಲಿಯೇ  ಗರ್ಭಿಣಿ ಮಹಿಳೆಯೊಬ್ಬಳು ಅವಳಿ ಮಕ್ಕಳಿಗೆ ಜನ್ಮ ನೀಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಅಂಬಮ್ಮ‌ ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿರುವುದು ವಿಶೇಷ.

ಸಿರವಾರ ಸಾರ್ವಜನಿಕ ಆಸ್ಪತ್ರೆಗೆ ಸಿರವಾರ ತಾಲ್ಲೂಕಿನ  ಕಸನದೊಡ್ಡಿ ಗ್ರಾಮದ ಅಂಬಮ್ಮ‌ದಾಖಲಾಗಿದ್ದಾರೆ. ಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದ ಹಿನ್ನಲೆ 108 ಆಂಬುಲೆನ್ಸ್‌ನಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು.  ನೋವು ಹೆಚ್ಚಾಗಿದ್ದು ಮಾರ್ಗ ಮಧ್ಯೆದ ಕುರಕುಂದ ಗ್ರಾಮದ ಬಳಿ ಸಿಬ್ಬಂದಿ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ. ಸದ್ಯ ಬಾಣಂತಿ ಹಾಗೂ ಅವಳಿ ಹೆಣ್ಣು ಮಕ್ಕಳು ಆರೋಗ್ಯವಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos