ಶಿವಮೊಗ್ಗ, ಮೇ. 25, ನ್ಯೂಸ್ ಎಕ್ಸ್ ಪ್ರೆಸ್: 2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸುಮಲತಾ ಅಂಬರೀಶ್ ಅವರು ಭರ್ಜರಿ ಜಯ ಸಾಧಿಸಿದ್ದಾರೆ.
ಅಭಿಮಾನ ಅಂದ್ರೆ ಇದಪ್ಪ, ಸುಮಲತಾ ಅವರ ಗೆಲುವಿಗೆ ಅಂಬರೀಶ್ ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದು, ಶಿವಮೊಗ್ಗದಲ್ಲಿ ಅಭಿಮಾನಿಯೊಬ್ಬರು ಈ ಗೆಲುವಿನ ಖುಷಿಗಾಗಿ 250ಕ್ಕೂ ಅಧಿಕ ಜನರಿಗೆ ಬಾಡೂಟ ಹಾಕಿಸಿದ್ದಾರೆ.
ಅಂಬರೀಶ್ ಅವರ ಕಟ್ಟಾ ಅಭಿಮಾನಿಯಾಗಿದ್ದ ಶಿವಮೊಗ್ಗ ಜೆ.ಹೆಚ್. ಪಟೇಲ್ ಬಡಾವಣೆ ನಿವಾಸಿ ಹನುಮಂತಪ್ಪ, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಕಣಕ್ಕಿಳಿದಾಗ ಅವರಿಗೆ ಗೆಲುವು ಹಾರೈಸಿ ಹಲವು ದೇವರುಗಳಿಗೆ ಹರಕೆ ಹೊತ್ತಿದ್ದರು. ಇದೀಗ ಸುಮಲತಾ ಅವರು ಗೆಲವು ಸಾಧಿಸುತ್ತಿದ್ದಂತೆ ಹನುಮಂತಪ್ಪ ಆತ್ಮೀಯರಿಗೆ ಭರ್ಜರಿ ಬಾಡೂಟ ಹಾಕಿಸಿದ್ದಾರೆ.