“ಮಂಡ್ಯಕ್ಕೆ ಅಪ್ಪನನ್ನು ಕರೆತಂದಿದ್ದು ಅಭಿಮಾನಿಗಳು…” ಅಭಿಷೇಕ್

“ಮಂಡ್ಯಕ್ಕೆ ಅಪ್ಪನನ್ನು ಕರೆತಂದಿದ್ದು ಅಭಿಮಾನಿಗಳು…” ಅಭಿಷೇಕ್

ಬೆಂಗಳೂರು, ಏ. 16, ನ್ಯೂಸ್ ಎಕ್ಸ್ ಪ್ರೆಸ್: ಕಳೆದ 20 ದಿನಗಳಿಂದ ಮಂಡ್ಯದ ಊರೂರು ಸುತ್ತಿ ಬಂದಿದ್ದೇವೆ. ಎದುರಾಳಿ ಪಕ್ಷದವರು ತಮ್ಮ ಅಭ್ಯರ್ಥಿ ಪರ ಪ್ರಚಾರ ಮಾಡಿದರೋ ಇಲ್ಲವೋ ಗೊತ್ತಿಲ್ಲ? ಅವರು ನನ್ನ ಅಪ್ಪ, ನನ್ನ ಅಮ್ಮ, ನನ್ನ ಅಣ್ಣಂದಿರು ಹಾಗೂ ನನ್ನ ಕುರಿತು ಮಾತನಾಡಿದ್ದೇ ಹೆಚ್ಚು ಎಂದು ಅಂಬರೀಷ್​ ಪುತ್ರ ಅಭಿಷೇಕ್​ ಕಿಡಿ ಕಾರಿದ್ದಾರೆ. ಮಂಡ್ಯದ ಸಿಲ್ವರ್​ ಜ್ಯುಬಿಲಿ ಪಾರ್ಕ್​ನಲ್ಲಿ ಆಯೋಜಿಸಿದ್ದ ‘ಸ್ವಾಭಿಮಾನ ಸಮ್ಮಿಲನ’ ಸಮಾವೇಶದಲ್ಲಿ ಮಾತನಾಡಿದ ಅಭಿಷೇಕ್​ ನ. 24 ರ ರಾತ್ರಿ 9 ಕ್ಕೆ ಅಪ್ಪ ಸತ್ತಾಗ ಅವರ ಜತೆ ಆಸ್ಪತ್ರೆಯಲ್ಲಿ ನಾನಿದ್ದೆ. ನನ್ನ ತಂದೆ ಮೃತದೇಹವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗುವಂತೆ ಸಿಎಂ ಎಚ್​.ಡಿ. ಕುಮಾರಸ್ವಾಮಿ ಬಳಿ ಮನವಿ ಮಾಡಿದ್ದೆ. ಇದು ನನ್ನ ತಂದೆ ಮೇಲಾಣೆಗೂ ಸತ್ಯ. ಆದರೆ, ನೀನು ಕೇಳಿದ್ದು ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು. ಆಗ ಅಭಿಮಾನಿಯೊಬ್ಬ ಮಂಡ್ಯಕ್ಕೆ ಅಂಬರೀಷ್​ ಬರದಿದ್ದರೆ ಸುಮ್ಮನೆ ಬಿಡಲ್ಲ ಎಂದು ಎಚ್ಚರಿಸಿದ್ದರು. ಮಂಡ್ಯಕ್ಕೆ ನಮ್ಮ ತಂದೆಯನ್ನು ಕರೆತಂದಿದ್ದು ನೀವು (ಮಂಡ್ಯದ ಜನತೆ) ಎಂದು ಅಭಿಷೇಕ್ ತಿಳಿಸಿದರು.  ಸುಮಲತಾ ಅವರ ಮುಖದಲ್ಲಿ ಅಂಬರೀಷ್​ ಸಾವಿನ ದುಃಖ ಕಾಣಿಸುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಸರಿ ನಮಗೆ ಆ ದುಃಖ ಗೊತ್ತಿಲ್ಲ, ನೀವು ಅದು ಏನು ಎಂದು ತೋರಿಸಿ ಎಂದು ಸಿಎಂಗೆ ಅಭಿಷೇಕ್​ ತಿರುಗೇಟು ನೀಡಿದರು. ನಮಗೆ ನಿಮ್ಮಲ್ಲಿ ಒಂದು ಸ್ಥಾನ ಇದೆ ಎಂದು ತೋರಿಸಬೇಕಿರುವುದು 18ನೇ ತಾರೀಖು. ಒಳ್ಳೆ ಉದ್ದೇಶ ಇಟ್ಟುಕೊಂಡು ನನ್ನ ತಾಯಿ ಬಂದಿದ್ದಾರೆ. ಅದಕ್ಕಾಗಿ ನನ್ನ ತಾಯಿಗೆ ಮತ ಕೊಡಿ ಎಂದು ನಾನು ಕೇಳುತ್ತಿದ್ದೇನೆ ಎಂದು ಅಭಿಷೇಕ್​ ಮನವಿ ಮಾಡಿದರು.

ಫ್ರೆಶ್ ನ್ಯೂಸ್

Latest Posts

Featured Videos