ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಾರೆ ಶಿವಣ್ಣ

ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಾರೆ ಶಿವಣ್ಣ

ಬೆಂಗಳೂರು, ಏ. 3, ನ್ಯೂಸ್ ಎಕ್ಸ್ ಪ್ರೆಸ್: ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮೊಟ್ಟಮೊದಲ ಬಾರಿಗೆ ಅಂಧನ ಪಾತ್ರ ಮಾಡುತ್ತಿರೋ ‘ಕವಚ ಚಿತ್ರವು ಏ. 5ರಂದು ಯುಗಾದಿಗೆ ರಾಜ್ಯಾದ್ಯಂತ ತೆರೆಕಾಣುತ್ತಿದೆ. ವಿಶೇಷ ಅಂದರೆ ಇದೇ ಏ. 9ಕ್ಕೆ ಶಿವಣ್ಣ ಹುಬ್ಬಳ್ಳಿ ಧಾರವಾಡಕ್ಕೆ ಭೇಟಿ ನೀಡುತ್ತಿದ್ದು, ಈ ವೇಳೆ ಅಭಿಮಾನಿಗಳ ಜೊತೆಯಲ್ಲಿ ಕುಳಿತು ಕವಚ ಚಿತ್ರ ವೀಕ್ಷಣೆ ಮಾಡಲಿದ್ದಾರೆ.

ಅಣ್ಣ ತಂಗಿ ಬಾಂಧವ್ಯದ ಕಥೆಯನ್ನು ಹೊಂದಿರೋ ಚಿತ್ರ ತುಂಬಾನೇ ನಿರೀಕ್ಷೆ ಮೂಡಿಸಿದೆ. ಚಿತ್ರವನ್ನ ಜಿವಿಆರ್ ವಾಸು ನಿರ್ದೇಶನ ಮಾಡಿದ್ದಾರೆ. ರಾಹುಲ್ ಶ್ರೀವಾಸ್ತವ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಜೋ.ನಿ.ಹರ್ಷ ಸಂಕಲನ ಹಾಗೂ ರವಿವರ್ಮ ಸಾಹಸ ನಿರ್ದೇಶನವಿದೆ.

ಫ್ರೆಶ್ ನ್ಯೂಸ್

Latest Posts

Featured Videos