ಲಕ್ನೋ, ಆ. 12 : ಮೇಕೆ ಖರೀದಿ ಮಾಡಬೇಕಾದರೆ ಹತ್ತುರಿಂದ ಇಪ್ಪತ್ತು ಸಾವಿರಕ್ಕೆ ಕೊಂಡುಕೊಳ್ಳವುದನ್ನು ಕೇಳಿದ್ದೇವೆ. ಅದನ್ನು ಸಹ ನೋಡಿದ್ದೇವೆ. ಈ ಮೇಕೆಯಲ್ಲಿ ಏನ್ನೋ ವಿಶೇಷತೆ ಎಂಬುದು ಗೊತ್ತಿಲ್ಲ. ಈ ಮೇಕೆ ಬರೋಬ್ಬರಿ 8 ಲಕ್ಷಕ್ಕೆ ಮಾರಾಟವಾಗಿದೆ. ದೇಶಾದ್ಯಂತ ಬಕ್ರೀದ್ ಹಬ್ಬ ಹಿನ್ನಲೆ ಸಲ್ಮಾನ್ ಎಂಬ ಹೆಸರಿನ ಮೇಕೆ ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಮೇಕೆ ಸಾಕಿರುವ ಮಾಲೀಕ ಮೊಹಮ್ಮದ್ ನಿಜಾಮುದ್ದೀನ್, 8 ಲಕ್ಷ ಮಾರಾಟ ಮಾಡುವುದಾಗಿ ಹೇಳಿದ್ದಾರೆ.
ಸಲ್ಮಾನ್ ಮೇಕೆ ವಿಶೇಷತೆಯ ಬಗ್ಗೆ ಹೇಳಿರುವ ಮಾಲೀಕ ಮೊಹಮ್ಮದ್ ನಿಜಾಮುದ್ದೀನ್, ಇದಕ್ಕೆ ಬೆಲೆ ಬರಲು ಆದರ ಮೈ ಮೇಲೆ ಕಪ್ಪು ಚುಕ್ಕಿಯೇ ಕಾರಣ ಕಪ್ಪು ಚುಕ್ಕೆಗಳನ್ನು ಕೂಡಿಸಿದರೆ, ಅರೇಬಿಕ್ ಭಾಷೆಯಲ್ಲಿ `ಅಲ್ಲಾಹ್’ ಎಂಬ ಅರ್ಥ ಬರತ್ತದೆ. ಹೀಗಾಗಿ ಸಲ್ಮಾನ್ ಮೇಕೆಯನ್ನು 8 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದೇನೆ ಎಂದಿದ್ದಾರೆ.ಇದಕ್ಕೆ 700ರಿಂದ 800 ರೂ. ಖರ್ಚು ಮಾಡಿದ್ದೇನೆ. ಇಷ್ಟು ದಿನ ಇದು ನಮ್ಮ ಮನೆಯ ಸದಸ್ಯ ಮತ್ತು ನಮ್ಮ ಜೊತೆಯಲ್ಲೇ ಮಲಗುತ್ತಿತ್ತು. ನಾವು ತಿನ್ನುವ ಆಹಾರವನ್ನೇ ಅದೂ ತಿನ್ನುತ್ತಿತ್ತು. ಬೇರೆ ಮೇಕೆಗಳ ಹಾಗೇ ನಾವು ಇದಕ್ಕೆ ಹುಲ್ಲು, ಎಲೆ ಮತ್ತು ಸೊಪ್ಪು ಹಾಕಿ ಬೆಳೆಸಿಲ್ಲ ಅದರ ಬದಲು ನಾವು ತಿನ್ನುವ ಚಿಪ್ಸ್, ಹಣ್ಣುಗಳು, ಊಟ ತಿನ್ನಿಸಿ ತುಂಬಾ ಚೆನ್ನಾಗಿ ಬೆಳೆಸಿದ್ದೇವೆ. ಬಾಲಿವುಡ್ ಬಾಯಿಜಾನ್ ಸಲ್ಮಾನ್ ಖಾನ್ ಹೆಸರು ಮೇಕೆಗೆ ಇಟ್ಟಿರುವ ಕಾರಣ ಸಲ್ಲು ಅಭಿಮಾನಿಗಳು ಇದಕ್ಕೆ ಜಾಸ್ತಿ ಬೆಲೆ ಕೊಟ್ಟು ಖರೀದಿಗೆ ಮುಂದಾಗಿದ್ದಾರೆ ಎಂದು ಮಾಲೀಕ ನಿಜಾಮುದ್ದೀನ್ ಹೇಳಿದ್ದಾರೆ.