ದೆಹಲಿಯ 6 ಕ್ಷೇತ್ರಗಳ ಅಭ್ಯರ್ಥಿ ಹೆಸರು ಘೋಷಿಸಿದ ಆಮ್ ಆದ್ಮಿ ಪಕ್ಷ

ದೆಹಲಿಯ 6 ಕ್ಷೇತ್ರಗಳ ಅಭ್ಯರ್ಥಿ ಹೆಸರು ಘೋಷಿಸಿದ ಆಮ್ ಆದ್ಮಿ ಪಕ್ಷ

ಮಾ.2, ನ್ಯೂಸ್‍ ಎಕ್ಸ್‍ ಪ್ರೆಸ್‍: ಆಮ್ ಆದ್ಮಿ ಪಕ್ಷ(ಎಎಪಿ)ದೆಹಲಿಯಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಅಥವಾ ಮಹಾ ಘಟಬಂಧನ್‌ನೊಂದಿಗೆ ಕೈಜೋಡಿಸುವುದಿಲ್ಲ ಎಂದು ಘೋಷಿಸಿದ ಮರು ದಿನವೇ ದೆಹಲಿಯ 7 ಲೋಕಸಭಾ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.

ಎಎಪಿ ಪಕ್ಷವು ಪೂರ್ವ ದೆಹಲಿಯಿಂದ ಅತಿಶಿ, ದಕ್ಷಿಣ ದೆಹಲಿಯಿಂದ ರಾಘವ್ ಚಡ್ಡರನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಚಾಂದಿನಿ ಚೌಕ್‌ನಿಂದ ಪಂಕಜ್ ಗುಪ್ತಾ, ಈಶಾನ್ಯ ಕ್ಷೇತ್ರದಿಂದ ದಿಲೀಪ್ ಪಾಂಡೆ, ವಾಯುವ್ಯ ಕ್ಷೇತ್ರದಿಂದ ಗುಗನ್ ಸಿಂಗ್ ಹಾಗೂ ನವದೆಹಲಿ ಲೋಕಸಭಾ ಕ್ಷೇತ್ರದಿಂದ ಬ್ರಜೇಶ್ ಗೊಯೆಲ್‌ರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ.

7ನೇ ಹಾಗೂ ಕೊನೆಯ ಲೋಕಸಭಾ ಕ್ಷೇತ್ರವಾದ ಪಶ್ಚಿಮ ದೆಹಲಿಯಿಂದ ಅಭ್ಯರ್ಥಿಯನ್ನು ಘೋಷಿಸಿಲ್ಲ.

ಫ್ರೆಶ್ ನ್ಯೂಸ್

Latest Posts

Featured Videos