ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದು ಪೌರಕಾರ್ಮಿಕ ಮಹಿಳೆ ಅಳಲು!

ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದು ಪೌರಕಾರ್ಮಿಕ ಮಹಿಳೆ ಅಳಲು!

ಬೆಂಗಳೂರು : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು 5 ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದು ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿದ ಇದರಿಂದ ರಾಜ್ಯದ ಎಲ್ಲಾ ಮಹಿಳೆಯರಿಗೆ ಉಪಯೋಗವಾಗುತ್ತದೆ.
ಗೃಹಲಕ್ಷ್ಮಿ ಯೋಜನೆ ಅನುದಾನ ಬರುತ್ತಿಲ್ಲ ಎಂದು ಪೌರಕಾರ್ಮಿಕ ಮಹಿಳೆ ಖುದ್ದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಳಿ ಅಸಮಾಧಾನ ತೋಡಿಕೊಂಡ ಘಟನೆ ನಡೆದಿದೆ. ಬಿಬಿಎಂಪಿಯಲ್ಲಿ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿಯವರನ್ನು ಆಹ್ವಾನಿಸಲು ಪೌರಕಾರ್ಮಿಕರ ನಿಯೋಗ ಇಂದು ಡಿ.ಕೆ.ಶಿವಕುಮಾರ್ ಅವರ ಮನೆಗೆ ಬಂದಿತ್ತು.
ಈ ವೇಳೆ ಇದೇ 12 ರಂದು ಕಾರ್ಯಕ್ರಮ ನಿಗದಿಯಾಗಿದೆ ಎಂದು ನಿಯೋಗದ ಸದಸ್ಯರು ತಿಳಿಸಿದರು. ನೀವು ಕಾರ್ಯಕ್ರಮ ಏರ್ಪಡಿಸುವಾಗ ನನ್ನ ಸಮಯ ನೋಡಿಕೊಂಡು ನಿಗದಿ ಮಾಡಬೇಕು. ನಿಮ್ಮಷ್ಟಕ್ಕೆ ನೀವೇ ದಿನಾಂಕ ನಿಗದಿ ಮಾಡಿದರೆ ನಮಗೆ ಬಿಡುವಿರುವುದಿಲ್ಲ. ಬರದೇ ಇದ್ದರೆ ನಿಮಗೆ ಅಪಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಂತದಲ್ಲಿ ಪ್ರತಿಮನೆಯ ಯಜಮಾನಿಗೆ 2,000 ರೂ. ನೀಡುವ ಗೃಹಲಕ್ಷ್ಮಿ ಸೇರಿದಂತೆ ಪಂಚಖಾತ್ರಿ ಯೋಜನೆಗಳನ್ನು ಜಾರಿಗೊಳಿಸ ಲಾಗುತ್ತಿದೆ. ಹೀಗಾಗಿ ಸ್ವಲ್ಪ ತಾಳ್ಮೆಯಿಂದಿರಿ. ಮುಂದಿನ ದಿನಗಳಲ್ಲಿ ನಿಮ್ಮ ಬೇಡಿಕೆಯನ್ನು ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿದರು.
ಈ ವೇಳೆ ನಿಯೋಗದಲ್ಲಿದ್ದ ಮಹಿಳೆಯೊಬ್ಬರು, ಎಲ್ಲಿ ಸ್ವಾಮಿ ನಮಗೆ ಹಣ ಬರುತ್ತಿಲ್ಲ ಎಂದು ಹೇಳಿದರು. ಇದರಿಂದ ಸಿಡಿಮಿಡಿಗೊಂಡ ಡಿ.ಕೆ.ಶಿವಕುಮಾರ್, ಎಲ್ಲರಿಗೂ ಹಣ ಬರುತ್ತಿದೆ. ಯಾರು ದಾಖಲೆಗಳನ್ನು ಸರಿಯಾಗಿ ಕೊಟ್ಟಿಲ್ಲವೋ ಅವರಿಗೆ ಬಂದಿಲ್ಲ. ನೀವು ಮೊದಲು ದಾಖಲೆಗಳನ್ನು ಸರಿಪಡಿಸಿಕೊಳ್ಳಿ ಎಂದು ಖಾರವಾಗಿ ಹೇಳಿದ್ದಲ್ಲದೆ, ಎಲ್ಲಾ ಮಹಿಳೆಯರೂ ಉಚಿತವಾಗಿ ಬಸ್‍ನಲ್ಲಿ ಓಡಾಡುತ್ತಿಲ್ಲವೇ ಎಂದು ಪ್ರಶ್ನಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos