ಹತ್ತು ವರ್ಷದ ಬಾಲಕಿ ಆತ್ಮಹತ್ಯೆ

ಹತ್ತು ವರ್ಷದ ಬಾಲಕಿ ಆತ್ಮಹತ್ಯೆ

ಕಿನ್ನಿಗೋಳಿ, ನ. 28 : 10 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಿನ್ನಿಗೋಳಿನಲ್ಲಿ ನಡೆದಿದೆ.
ಕಮ್ಮಾಜೆ ನಿವಾಸಿ ಶ್ರೀಲತಾ ಅವರ ಪುತ್ರಿ ಧ್ರುವಿ (10) ಬುಧವಾರ ಮನೆಯಲ್ಲಿ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆಕೆ ಕಿನ್ನಿಗೋಳಿಯ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿದ್ದಳು. ಐಕಳ ಕಿರೆಂ ಚರ್ಚ್ನಲ್ಲಿ ವಾರ್ಷಿಕ ಹಬ್ಬ ಇದ್ದ ಕಾರಣ ಶಾಲೆಗೆ ರಜೆ ನೀಡಲಾಗಿತ್ತು. ಮನೆಯಲ್ಲಿ ಅಜ್ಜಿ ಪದ್ಮಿನಿ ಮಾತ್ರ ಇದ್ದು, ಬಾಲಕಿ ಟಿ.ವಿ. ನೋಡುತ್ತಿದ್ದಳು. ಬಳಿಕ ವಿದ್ಯುತ್ ಹೋಗಿದ್ದು, ಆಗ ಓದುವಂತೆ ಆಕೆಗೆ ಹೇಳಲಾಗಿತ್ತು.
ಕೂಡಲೇ ಆಕೆ ಕೋಣೆಯೊಳಗೆ ಹೋಗಿದ್ದಳು. ತುಂಬಾ ಹೊತ್ತಾದರೂ ಹೊರಗೆ ಬಾರದಾಗ ಮನೆಯವರು ಒಳ ಹೋಗಿ ನೋಡಿದ್ದು, ಆಗ ಆಕೆ ತಲೆಗೆ ಕಟ್ಟುವ ರಿಬ್ಬನ್ ನಿಂದ ಕಿಟಿಕಿಗೆ ನೇಣು ಬಿಗಿದಿದ್ದುದು ಕಂಡುಬಂತು ಎಂದು ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos