ಬಾಗೆಪಲ್ಲಿ, ಡಿ. 23: ಬಾಗೆಪಲ್ಲಿ ಪಟ್ಟಣ ಗೂಳೂರು ರಸ್ತೆಯಲ್ಲಿನ ಶಾಂತಿನಿಕೇತನ ಶಾಲೆಯ ಹತ್ತಿರ ಒಳಚರಂಡಿ ಗುಂಡಿಬಿದ್ದಿದೆ. ಕಳಪೆ ಗುಣಮಟ್ಟ ಕಾಮಗಾರಿಯಿಂದಾಗಿ ಗುಂಡಿ ಬಾಯಿ ತೆರೆದುಕೊಂಡಿದೆ.(ಮುರಿದುಹೋಗಿದೆ).
ಮುಖ್ಯವಾಗಿ ಈ ರಸ್ತೆಯಲ್ಲಿ ಶಾಂತಿನಿಕೇತನ ಶಾಲೆಯ ಸುಮಾರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇದೇ ರಸ್ತೆಯಲ್ಲಿ ಓಡಾಡುತ್ತಾರೆ, ಇದೇ ರಸ್ತೆಯಲ್ಲಿ ಬಾರ್ ಗಳು ಇರುವುದರಿಂದ, ಕುಡಿದು ಅಮಲಿನಲ್ಲಿ ಓಡಾಡುವವರು, ಮುದುಕರು, ಮಹಿಳೆಯರು, ವಾಹನ ಸವಾರರು ಬಿದ್ದಿರುವ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ದ್ವಿಚಕ್ರ ವಾಹನ ಸವಾರರು ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ವಾಹನ ಚಲಾಯಿಸುವ ಸಂದರ್ಭ ಹೆಚ್ಚಳವಾಗಿದೆ. ದೊಡ್ಡಮಟ್ಟದ ಅನಾಹುತ ಆಗುವ ಮುಂಚೆ ಒಳಚರಂಡಿ ಮಂಡಳಿಯವರು ಮತ್ತು ಸಂಬಂಧಪಟ್ಟಿರುವ ಅಧಿಕಾರಿಗಳು ಇದರ ಕಡೆ ಗಮನಹರಿಸಿ ಇದನ್ನು ಸರಿ ಪಡೆಸಬೇಕೇಂದು ಸಾರ್ವಜನಿಕರು ಒತ್ತಾಯಮಾಡಿರುತ್ತಾರೆ. ಮುಂದಿನ ದಿನಗಳಲ್ಲಿ ಈ ಗುಂಡಿ ಮುಚ್ಚುದಿದ್ದಾರೆ ಕರವೇ ಸ್ವಾಭಿಮಾನಿ ಬಣ ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಗುತ್ತದೆಂದು ಜಭೀವುಲ್ಲಾರವರು ಎಚ್ಚರಿಕೆ ನೀಡಿರುತ್ತಾರೆ.