ಬೆಂಗಳೂರು, ನ. 24 : ಗೆಳತಿ ಪ್ರೇರಣಾ ಶಂಕರ್ ಜೊತೆ ಅದ್ದೂರಿ ಹುಡುಗ ಭರ್ಜರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬೆಳಗ್ಗೆ 7.15ರಿಂದ 7.45ಕ್ಕೆ ಶುಭ ಮೂಹೂರ್ತದಲ್ಲಿ ಧ್ರುವ ಸರ್ಜಾ ಪ್ರೇರಣಾ ಅವರನ್ನು ವರಿಸಿದ್ದಾರೆ. ವೃಶ್ಚಿಕ ಲಗ್ನದಲ್ಲಿ ನವಜೋಡಿ ಸಪ್ತಪದಿ ತುಳಿದಿದ್ದಾರೆ. ಜೆ.ಪಿ.ನಗರದ ಸಂಸ್ಕೃತ ಬೃಂದಾವನ ಕನ್ವೆನ್ಷನ್ ಹಾಲ್ ನಲ್ಲಿ ವಿವಾಹ ಮಹೋತ್ಸವ ನೇರವೇರಿದ್ದು, ಗೌಡ ಸಂಪ್ರದಾಯದಂತೆ ಧ್ರುವ ಹಾಗೂ ಪ್ರೇರಣಾ ಸಪ್ತಪದಿ ತುಳಿದಿದ್ದಾರೆ.
ಇಂದು ಸಂಜೆ ಏಳು ಗಂಟೆಗೆ ರಿಸೆಪ್ಶನ್ ಇರಲಿದೆ. ನಾಳೆ ಅಭಿಮಾನಿಗಳಿಗಾಗಿ ಸರ್ಜಾ ಕುಟುಂಬ ವಿಶೇಷ ಔತಣ ಕೂಟ ಏರ್ಪಡಿಸಿದೆ. ಜೊತೆಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಇರಲಿವೆ.
ಕಲ್ಯಾಣದ ಖುಷಿಯಲ್ಲಿ ಧ್ರುವ ಸರ್ಜಾ ಕುಟುಂಬ ಮನೆಯ ಮುಂದೆ ಇಡೀ ಬೀದಿಗೆ ಚಪ್ಪರ ಹಾಕಿ, ಬಾಳೆಕಂಬಗಳಿಂದ ‘ಅದ್ಧೂರಿ’ ಅಲಂಕಾರ ಮಾಡಿದ್ದರು. ವರಪೂಜೆ, ಚಪ್ಪರ ಪೂಜೆ ಸೇರಿದಂತೆ ಹಲವು ಕಾರ್ಯಕ್ರಮಗಳು ಸರ್ಜಾ ಕುಟುಂಬದಲ್ಲಿ ಅದ್ಧೂರಿಯಾಗಿ ನಡೆದಿತ್ತು. ಧ್ರುವ ಸರ್ಜಾ ಮತ್ತು ಪ್ರೇರಣಾ ಮನೆಯಲ್ಲಿ ಶಾಸ್ತ್ರೋಕ್ತವಾದ ನಡೆದ ಕಾರ್ಯಕ್ರಮ ಗುರು-ಹಿರಿಯರ ಸಂಮ್ಮುಖದಲ್ಲಿ ನೆರವೇರಿತ್ತು.