ಅದ್ದೂರಿ ಗಣೇಶೋತ್ಸವ

ಅದ್ದೂರಿ ಗಣೇಶೋತ್ಸವ

ಹೊಸಕೋಟೆ, ಸೆ. 5: ನಾವು ಇಡೀ ವರ್ಷ ಪೂರ್ತಿ ಕೆಲಸ ಕಾರ್ಯ ದುಡಿಮೆಯಲ್ಲಿ ನಿರತರಾಗುತ್ತೇವೆ ಒಮ್ಮೆಮ್ಮೆ ದೇವರನ್ನು ಮರೆತು ಬಿಡುತ್ತೇವೆ. ಆದರೆ, ಆ ದೇವರನ್ನು ಮರೆಯದಂತೆ ಪ್ರತಿ ವರ್ಷವೂ ಒಂದೊಂದು ದೇವರ ಹಬ್ಬವನ್ನು ನಮಗೆ ಕರುಣಿಸಿದ್ದಾನೆ. ಆದ್ದರಿಂದ ಅದ್ದೂರಿಯಾಗಿ ದೇವರ ಪೂಜೆ ಮಾಡಿ ಆನಂದಿಸಿದ್ದೇವೆ ಎಂದು ಲಘುವಾಹನ ಮಾಲೀಕರ ಹಾಗು ಚಾಲಕರ ಸಂಘದ ಅದ್ಯಕ್ಷ ಮಲ್ಲಿಮಾಕನಪುರ ರಾಜು ತಿಳಿಸಿದ್ದಾರೆ.

ಹೊಸಕೋಟೆ ನಗರದ ಕೋರ್ಟ್ ಸರ್ಕಲ್ ಬಳಿಯ ಲಘುವಾಹನಗಳ ನಿಲ್ದಾಣದಲ್ಲಿ ಗಣೇಶನ ಮೂರ್ತಿಯನ್ನು ಮೊದಲನೇ ವರ್ಷದಲ್ಲಿ ಸ್ಥಾಪನೆ ಮಾಡಿ, ವಿಸರ್ಜನೆ ಕೈಗೊಂಡಿದ್ದು, ತಮಟೆ, ಡೋಲು, ಡಿಜೆ ಮಖಾಂತರ ಅದ್ದೂರಿಯಾ ನಗರದ ಪ್ರಮುಖ ಭೀದಿಗಳಲ್ಲಿ ತಮಟೆ ಏಟಿಗೆ ಅದ್ದೂರಿ ಡ್ಯಾನ್ಸ್ ಮಾಡುವು ಮುಖಾಂತರ ವಿಸರ್ಜನೆ ಮಾಡಿದರು.

ಇದಕ್ಕು ಮುನ್ನ ಮಾತನಾಡಿದ ಅವರು ನಾವು ಇಡಿ ವರ್ಷ ಪೂರ್ತಿ ದುಡಿಯುತ್ತೇವೆ ವರ್ಷದ ಮೂರು ದಿನವಾದರು ದೇವರನ್ನು ನೆನೆದು ಪೂಜೆ ಮಾಡದ ಮೇಲೆ ನಮಗೆ ಭಕ್ತಿಯಾಕೆ. ಆದ್ದರಿಂದ ನಮ್ಮ ಸಂಘದ ಎಲ್ಲಾ ಮಾಲೀಕರ ಹಾಗು ಚಾಲಕರ ಸಹಾಯದಿಂದ ಒಗ್ಗಟ್ಟಾಗಿ ಗಣೇಶನನ್ನು ಸ್ಥಾಪನೆ ಮಾಡಿದ್ದು, ಈಗ ವಿಸರ್ಜನೆ ಮಾಡುತ್ತಿದ್ದೇವೆ ಎಂದರು. ಈ ಸಂದರ್ಭದಲ್ಲಿ ಸಂಘದ ಉಪಾದ್ಯಕ್ಷ ತಗ್ಗಲಿ ಲೋಕೇಶ್, ಪ್ರಶಾಂತ್, ಹಾಗು ಎಲ್ಲಾ ಸದಸ್ಯರು ಸಾರ್ವಜನಿಕರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos