ಕೆ.ಆರ್.ಪುರ, ನ. 23: ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರ ದಿನದಿಂದ ದಿನ ದಿನಕ್ಕೆ ರಂಗೇರುತ್ತಿದೆ, ಶನಿವಾರ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ್ ಪರ ಅವರ ಪತ್ನಿ ಪದ್ಮಾವತಿ, ಶಾಸಕಿ ಪೂರ್ಣಿಮಾ ಶ್ರೀನಿವಾಸ್, ತಮ್ಮ ಬೆಂಬಲಿಗರೊಂದಿಗೆ ಅದ್ದೂರಿ ಪ್ರಚಾರ ನಡೆಸಿದರು, ಬೈರತಿ ಬಸವರಾಜ್ ಪತ್ನಿ ಪದ್ಮಾವತಿ ಕೆ.ಆರ್ ಪುರದ ವಾಸವಿ ಮಹಾಲ್ ರಸ್ತೆ, ಶೀಗೆಹಳ್ಳಿ ಕಡೆ ಪ್ರಚಾರ ನಡೆಸಿದರು, ಪೂರ್ಣಿಮಾ ಶ್ರೀನಿವಾಸ್ ಹಳೆ ಬಡಾವಣೆ, ವಿಬಿ ಲೇಔಟ್ ಗಳಲ್ಲಿ ಪ್ರಚಾರ ನಡೆಸಿದರು.
ಇದೇ ವೇಳೆ ಅಭಿಮಾನಿಗಳು ಬೃಹತ್ ಗಾತ್ರದ ಹಾರ ಹಾಕಿ ಸ್ವಾಗತಿಸಿದರು, ಅಭ್ಯರ್ಥಿ ಬೈರತಿ ಬಸವರಾಜ್ ಟಿಸಿ ಪಾಳ್ಯಾ, ಆನಂದಪುರ ಸೇರಿದಂತೆ ಹಲವೆಡೆ ಪ್ರಚಾರದ ವೇಳೆ ಅಭಿಮಾನಿಗಳು ಬೃಹತ್ ಗಾತ್ರದ ಆಪಲ್‌ಹಾರ ಹಾಕಿ ಸ್ವಾಗತಿಸಿದರು, ನಂತರ ಮಾತನಾಡಿದ ಅವರು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.