ಬೆಂಗಳೂರಿನ ಪ್ರತಿಯೊಬ್ಬ ಮತದಾರನ ಮೌಲ್ಯ 7 ಲಕ್ಷ ರೂ.!

ಬೆಂಗಳೂರಿನ ಪ್ರತಿಯೊಬ್ಬ ಮತದಾರನ ಮೌಲ್ಯ 7 ಲಕ್ಷ ರೂ.!

ಬೆಂಗಳೂರು, ಮಾ, 26, ನ್ಯೂಸ್ ಎಕ್ಸ್ ಪ್ರೆಸ್: ಪ್ರತಿ ಚುನಾವಣೆ ವೇಳೆ ಕೇವಲ ಒಂದೆರಡು ಸಾವಿರ ರೂಪಾಯಿಗಳಿಗೆ ಮತಗಳು ಬಿಕರಿ ಆಗುತ್ತವೆ. ಆದರೆ, ವಾಸ್ತವವಾಗಿ ಬೆಂಗಳೂರಿನಲ್ಲಿರುವ ಪ್ರತಿಯೊಬ್ಬ ಪ್ರಜೆಯ ಮತದ ಮೌಲ್ಯ 6ರಿಂದ 7 ಲಕ್ಷ ರೂ.! ಹೌದು, ಕಳೆದ ಐದು ವರ್ಷಗಳಲ್ಲಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ, ಬಿಬಿಎಂಪಿ ಬಜೆಟ್‌ಗಳು, ಕೇಂದ್ರದ ಅನುದಾನ ಸೇರಿದಂತೆ ವಿವಿಧ ರೂಪಗಳಲ್ಲಿ 55 ಸಾವಿರ ಕೋಟಿಗೂ ಅಧಿಕ ಮೊತ್ತ ಹರಿದುಬಂದಿದೆ.

ಅದನ್ನು ನಗರದಲ್ಲಿರುವ ಸುಮಾರು 72 ಲಕ್ಷ ಮತದಾರರಿಗೆ ಹಂಚಿಕೆ ಮಾಡಿದರೆ, ತಲಾ 6ರಿಂದ 7 ಲಕ್ಷ ರೂ. ಬರುತ್ತದೆ. ಆದರೆ, ಅದೇ ಐದು ವರ್ಷಗಳಿಗೊಮ್ಮೆ ಬರುವ ಚುನಾವಣೆಯಲ್ಲಿ ಮತಗಳು ಕೇವಲ ಎರಡು-ಮೂರು ಸಾವಿರ ರೂ.ಗೆ ಬಿಕರಿ ಆಗುವ ಪ್ರಕರಣಗಳು ಕಂಡುಬರುತ್ತಿವೆ. 2014-15ರಿಂದ 2018-19ರವರೆಗೆ ಬಿಬಿಎಂಪಿಯಲ್ಲಿ 43,580 ಕೋಟಿ ಮೊತ್ತದ ಬಜೆಟ್‌ ಮಂಡನೆ ಆಗಿದೆ. ಇದೇ ಅವಧಿಯಲ್ಲಿ ರಾಜ್ಯ ಸರ್ಕಾರದಿಂದ 14ರಿಂದ 15 ಸಾವಿರ ಕೋಟಿ ರೂ. ಅನುದಾನ ಬಂದಿದೆ. ಇದಲ್ಲದೆ, ಸ್ಮಾರ್ಟ್‌ಸಿಟಿ, ಸಂಸದರ ನಿಧಿ, ರಾಜ್ಯಸಭಾ ಸದಸ್ಯರ ನಿಧಿ, ವಿಶ್ವವಿದ್ಯಾಲಯಗಳು ಸೇರಿದಂತೆ ವಿವಿಧ ರೂಪದಲ್ಲಿ ನೂರಾರು ಕೋಟ್ಯಂತರ ರೂ. ಬಂದಿದೆ.

ಅದೆಲ್ಲವೂ ಸಮರ್ಪಕ ಬಳಕೆ ಆಗಬೇಕಾದರೆ, ಪ್ರತಿಯೊಬ್ಬರೂ ಮತ ಚಲಾಯಿಸಬೇಕು ಹಾಗೂ ಆ ಮೂಲಕ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಬೇಕು ಎಂದು ತಜ್ಞರು ತಿಳಿಸುತ್ತಾರೆ. ನಗರದ ಅಭಿವೃದ್ಧಿಗಾಗಿ ಬರುವ ಅನುದಾನದ ಮೇಲೆ ನಾಗರಿಕರ ಹಕ್ಕಿದೆ. ಈ ಅನುದಾನದ ಸಮರ್ಪಕ ಬಳಕೆಗಾಗಿ ಜನ, ಮತ ಚಲಾಯಿಸುವ ಮೂಲಕ ತಮ್ಮ ಜನಪ್ರತಿನಿಧಿಯನ್ನು ಆಯ್ಕೆ ಮಾಡುತ್ತಾರೆ. ಆದರೆ ಕೇವಲ ಎರಡು-ಮೂರು ಸಾವಿರ ರೂ.ಗಳಿಗೆ ಆ ಮತಗಳನ್ನೇ ಮಾರಾಟ ಮಾಡುವುವದರಿಂದ ತಮಗೆ ಗೊತ್ತಿಲ್ಲದೆ, ಲಕ್ಷಾಂತರ ರೂ. ನಷ್ಟ ಅನುಭವಿಸಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos