ಬೀಜಿಂಗ್, ಮಾ. 23, ನ್ಯೂಸ್ ಎಕ್ಸ್ ಪ್ರೆಸ್: ಚೀನಾದ ಹಂಗ್ಸು ಪ್ರಾಂತ್ಯದ ಯಾನ್‍ಚೆಂಗ್‍ನ ರಾಸಾಯನಿಕ ಕೈಗಾರಿಕಾ ಪಾರ್ಕ್‍ನ ಗೊಬ್ಬರ ಕಾರ್ಖಾನೆಯಲ್ಲಿ ಇಂದು ಬೆಂಕಿ ಕಾಣಿಸಿಕೊಂಡು ಭಾರೀ ಸ್ಫೋಟ ಸಂಭವಿಸಿದೆ. ಇಂದು ಮೃತರ ಸಂಖ್ಯೆ 64ಕ್ಕೇರಿದ್ದು, 32 ಜನರು ತೀವ್ರ ಗಾಯಗೊಂಡಿದ್ಧಾರೆ.
ದುರ್ಘಟನೆ ಸ್ಥಳದಲ್ಲಿ ಅಪಾಯಕ್ಕೆ ಸಿಲುಕಿದ್ದ 88 ಜನರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ಸ್ಫೋಟದ ತೀವ್ರತೆಗೆ ಉರುಳಿಬಿದ್ದ ಕಟ್ಟಡದಲ್ಲಿ ಸಿಲುಕಿದ್ದ ಅನೇಕ ಕಾರ್ಮಿಕರನ್ನು ರಕ್ಷಣಾ ಕಾರ್ಯಕರ್ತರು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೀಟನಾಶಕ ಘಟಕದಲ್ಲಿ ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ ನಂತರ ಇಡೀ ಕಾರ್ಖಾನೆಯನ್ನು ಆವರಿಸಿ ಸ್ಫೋಟ ಸಂಭವಿಸಿತು. 176 ವಾಹನಗಳೊಂದಿಗೆ 928 ಸಿಬ್ಬಂದಿ ಅಗ್ನಿ ನಂದಿಸುವ ಕಾರ್ಯದಲ್ಲಿ ಶರಮಿಸಿದರು.