ಬೆಂಗಳೂರು, ಮಾ.21, ನ್ಯೂಸ್ ಎಕ್ಸ್ ಪ್ರೆಸ್: ಧಾರವಾಡದಲ್ಲಿ ಕಟ್ಟಡ ಕುಸಿತ ಉಂಟಾಗಿರುವ ಘಟನೆ ಬಗ್ಗೆ ಈಗಾಗಲೇ ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದ್ದು, ಕಟ್ಟಡ ನಿರ್ಮಾಣದಲ್ಲಿ ಲೋಪವಾಗಿದ್ದರೆ ಸೂಕ್ತ ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಕಟ್ಟಡ ಕುಸಿತ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಎಂಜಿನಿಯರ್‍ನನ್ನು ಬಂಧಿಸಲಾಗಿದೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚುತ್ತಿರುವುದು ನೋವಿನ ಸಂಗತಿ. ಇದು ದೊಡ್ಡ ದುರಂತವಾಗಿದೆ.
ಸರ್ಕಾರದ ಅಧಿಕಾರಿಗಳು ಕಾಲಹರಣ ಮಾಡದೆ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು. ಕಟ್ಟಡ ಕುಸಿತದಿಂದ ಅವಶೇಷಗಳಡಿ ಸಿಲುಕಿರುವವರ ಜೀವ ಉಳಿಸುವ ಶತಪ್ರಯತ್ನ ಮಾಡಲಾಗುತ್ತಿದೆ.