ಗೋವಾ ಬಿಜೆಪಿಯಿಮದ ಬಹುಮತ ಸಾಬೀತು

ಗೋವಾ ಬಿಜೆಪಿಯಿಮದ ಬಹುಮತ ಸಾಬೀತು

ಪಣಜಿ, ಮಾ.20, ನ್ಯೂಸ್ ಎಕ್ಸ್ ಪ್ರೆಸ್: ಗೋವಾದಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರ ಯಶಸ್ವಿಯಾಗಿದ್ದು, ಮೊದಲ ಪರೀಕ್ಷೆಯಲ್ಲಿ ನೂತನ ಸಿಎಂ ಪ್ರಮೋದ್ ಸಾವಂತ್ ಉತ್ತೀರ್ಣರಾಗಿದ್ದಾರೆ.

ಒಟ್ಟು 20 ಶಾಸಕರು ಪ್ರಮೋದ್ ಸಾವಂತ್ ಪರ ಮತ ಚಲಾಯಿಸಿದ ಕಾರಣ ಅವರು ಬಹುಮತ ಸಾಬೀತುಪಡಿಸಿದರು.

ಗೋವಾದಲ್ಲಿ ಇಂದು ವಿಶ್ವಾಸಮತ ಯಾಚನೆ, 5-ಸ್ಟಾರ್ ಹೊಟೆಲ್ ನಲ್ಲಿ ಶಾಸಕರು!

ಇಂದು ವಿಶ್ವಾಸಮತದ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಎಲ್ಲಾ ಶಾಸಕರನ್ನೂ ಗೋವಾದ ಫೈವ್ ಸ್ಟಾರ್ ಹೊಟೆಲ್ ವೊಂದಕ್ಕೆ ಕಳಿಸಿತ್ತು. ಒಟ್ಟು 40 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಗೋವಾ ಸದ್ಯಕ್ಕೆ 36 ಸದಸ್ಯ ಬಲ ಹೊಂದಿದೆ. ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರಿಕ್ಕರ್ ಮತ್ತು ಬಿಜೆಪಿ ಶಾಸಕ ಫ್ರಾನ್ಸಿಸ್ ಡಿಸೋಜಾ ನಿಧನದಿಂದ ಹಾಗೂ ಕಾಂಗ್ರೆಸ್ ನ ಇಬ್ಬರು ಶಾಸಕರಾದ ಸುಭಾಶ್ ಶಿರೋಡ್ಕರ್ ಮತ್ತು ದಯಾನಂದ್ ಸೊಪ್ಟೆ ಅವರ ರಾಜೀನಾಮೆಯಿಂದ ನಾಲ್ಕು ಸ್ಥಾನಗಳು ತೆರವಾಗಿವೆ.

ಒಟ್ಟು 36 ಸದಸ್ಯ ಬಲದ ಗೋವಾ ವಿಧಾನಸಭೆಗೆ ಅಗತ್ಯವಿರುವ ಬಹುಮತ 19. ಬಿಜೆಪಿ ಪರ 20 ಶಾಸಕರು ಮತ ಚಲಾಯಿಸಿದ್ದರಿಂದ ಸಾವಂತ್ ಸರ್ಕಾರ ಬಹುಮತ ಸಾಬೀತುಪಡಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos