ಸ್ವಚ್ಛ ಸರ್ವೇಕ್ಷಣ, ಬೆಂಗಳೂರಿಗೆ 194ನೇ ಸ್ಥಾನ

ಸ್ವಚ್ಛ ಸರ್ವೇಕ್ಷಣ, ಬೆಂಗಳೂರಿಗೆ 194ನೇ ಸ್ಥಾನ

ಬೆಂಗಳೂರು, ಮಾ.7, ನ್ಯೂಸ್ ಎಕ್ಸ್ ಪ್ರೆಸ್: ನಮ್ಮ ಕೆಂಪೇಗೌಡರ ನಾಡು ಬೆಂಗಳೂರನ್ನು ಸ್ವಚ್ಛ ನಗರವಾಗಿಸಬೇಕೆಂದು ಬಿಬಿಎಂಪಿ ನವರು ಪಟ್ಟಿ ಶ್ರಮ ವ್ಯರ್ಥವಾಗಿದೆ. ಆದರೂ ಕೂಡ ಪರವಾಗಿಲ್ಲ ನಮ್ಮ ಬೆಂಗಳುರು 22ನೇ ಸ್ಥಾನ ಮೇಲೆ ಜಿಗಿದು 194ನೇ ಸ್ಥಾನಕ್ಕೇ ಯೇರಿರುವುದು ಸ್ವಲ್ಪ ನೆಮ್ಮದಿ ತಂದಿದೆ. ತ್ಯಾಜ್ಯ ವಿಲೇವಾರಿ, ಸಂಸ್ಕರಣೆ, ಸ್ವಚ್ಛತೆಗೆ ಬಿಬಿಎಂಪಿ ಕೈಗೊಂಡ ಕ್ರಮಗು ಕೇಂದ್ರ ಸರ್ಕಾರದ ಪ್ರಶಂಸೆಗೆ ಪಾತ್ರವಾಗಿದ್ದವು. ಅದರೊಂದಿಗೆ ಇದೇ ಮೊದಲ ಬಾರಿಗೆ ಗೊಬ್ಬರ ತಯಾರಿಕೆ ಕಲಿಕಾ ಕೇಂದ್ರವನ್ನು ಬಿಬಿಎಂಪಿಯಿಂದ ಆರಂಭಿಸಲಾಗಿದೆ.

ಇದರ ಜೊತೆಗೆ ಸ್ವಚ್ಛ ಸರ್ವೇಕ್ಷಣ ಅಭಿಯಾನಕ್ಕಾಗಿ ವಾರ್ಡ್ ವಾರು ಕಾಂಪೋಸ್ಟ್ ಸಂತೆ, ಇ-ಶೌಚಗೃಹ, ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಸೇರಿ ಹಲವು ಅಭಿಯಾನಗಳನ್ನು ನಡೆಸಲಾಗಿತ್ತು.

ಹಾಗಾದರೆ ಬೆಂಗಳೂರಿಗೆ ಮಾರಕವಾದ ಅಂಶವೇನು ಎಂದು ನೋಡುವುದಾದರೆ, ಕೇಂದ್ರ ಅಭಿವೃದ್ಧಿ ಇಲಾಖೆಯ ಸ್ವಚ್ಛ ಸರ್ವೇಕ್ಷಣ ಅಮೀಕ್ಷೆಯಂತೆ ನಗರಗಳು ಸಂಪೂರ್ಣವಾಗಿ ಬಯಲು ಮುಕ್ತಶೌಚಯ ಎಂದು ಘೋಷಿಸಿಕೊಳ್ಳಬೇಕು.

ರ್ಯಾಂ ಕಿಂಗ್ ನೀಡುವ ಸಮಯಲ್ಲಿಯೂ ಇದೇ ಅಂಶವನ್ನು ಪ್ರಮುಖ ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಆದರೆ ಬಿಬಿಎಂಪಿ ವ್ಯಾಪ್ತಿಯಲ್ಲಿನ 198 ವಾರ್ಡ್ ಪೈಕಿ ಈಲ್ಲಿವರೆಗೆ ಯಾವ ವಾರ್ಡ್ ಅಧಿಕೃತವಾಗಿ ಬಯಲು ಶೌಚಮುಕ್ತವಾಗಿರುವ ಬಗ್ಗೆ ಕೇಂದ್ರ ಸರ್ಕಾರದ ಪ್ರಮಾಣಪತ್ರ ಪಡೆದಿಲ್ಲ. ಬೆಂಗಳೂರು ದೇಶದ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ 425 ನಗರಗಳ ಸಾಲಿನಲ್ಲಿತ್ತು. ಸಮೀಕ್ಷೆಯಲ್ಲಿ 5 ಸಾವಿರ ಅಂಕಗಳಲ್ಲಿ ಒಟ್ಟು ನಮ್ಮ ಬೆಂಗಳೂರಿಗೆ 2351.81 ಅಂಕಗಳು ಸಿಕ್ಕಿದೆ. ಸ್ವಚ್ಛ ನಗರಗಳ ಮಾನದಂಡದಲ್ಲಿ ಬಯಲು ಬಹಿರ್ದೆಸೆ ತಡೆಯುವುದು ಮತ್ತು ಶೌಚಾಲಯಗಳ ನಿರ್ಮಾಣವು ಪ್ರಮುಖವಾಗಿತ್ತು. ಸ್ಟಾರ್ ರೇಟಿಂಗ್ ಸೇರಿ ಬಯಲು ಬಹಿರ್ದೆಸೆ ಮುಕ್ತ ವಿಭಾಗಕ್ಕೆ 1250 ಅಂಕಗಳಿದ್ದವು. ಇದರಲ್ಲಿ ನಗರಕ್ಕೆ ಕೇವಲ 25 ಅಂಕಗಳಷ್ಟೇ ದೊರೆತಿವೆ. ಹೀಗಾಗಿ 50ರ ಒಳಗೆ ರ್ಯಾಂ ಕ್ ಪಡೆಯಲು ಸಾಧ್ಯವಾಗಿಲ್ಲ.

ಫ್ರೆಶ್ ನ್ಯೂಸ್

Latest Posts

Featured Videos