ಏರೋ ಇಂಡಿಯಾ ಅಗ್ನಿ 6 ಕಾರುಗಳ ಮಾಲೀಕರ ಸುಳಿವೇ ಇಲ್ಲ

  • In State
  • March 7, 2019
  • 248 Views
ಏರೋ ಇಂಡಿಯಾ ಅಗ್ನಿ 6 ಕಾರುಗಳ ಮಾಲೀಕರ ಸುಳಿವೇ ಇಲ್ಲ

ಬೆಂಗಳೂರು, ಮಾ.7, ನ್ಯೂಸ್ ಎಕ್ಸ್ ಪ್ರೆಸ್: ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಸಮಯ ಸುಟ್ಟು ಹೋಗಿದ್ದ 277 ಕಾರುಗಳ ಪೈಕಿ 6 ಕಾರುಗಳ ಮಾಲಿಕತ್ವ ಹಾಗೂ ಮಾಲೀಕರು ಪತ್ತೆಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಯಲಹಂಕದ ವಾಯುನೆಲೆಯಲ್ಲಿ ನಡೆದ ಏರೋ ಇಂಡಿಯಾ 2019ರ ವೈಮಾನಿಕ ಪ್ರದರ್ಶನದ ಸಮಯ ಗೇಟ್ ನಂಬರ್ 5 ಪಾರ್ಕಿಂಗ್ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು 277 ಕಾರುಗಳು ಸುಟ್ಟು ಕರಕಲಾಗಿದ್ದವು.

ಕಾರುಗಳು ಸುಟ್ಟು ಸಂಪೂರ್ಣ ಕರಕಲಾಗಿದ್ದು, ಎಂಜಿನ್ ಸಂಖ್ಯೆ, ಚಾಸೀಸ್ ಸಂಖ್ಯೆಯನ್ನು ಕೂಡ ಗುರುತಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಾಲಿಕತ್ವ ಗೊತ್ತಾಗುತ್ತಿಲ್ಲ. ಅಲ್ಲದೇ ಆ ಕಾರುಗಳನ್ನು ತಮ್ಮದು ಎಂದು ಹೇಳಿಕೊಂಡು ಯಾರೂ ಸಹ ಬರುತ್ತಿಲ್ಲ.

ಹೀಗಾಗಿ ಕಾರುಗಳ ವಿಲೇವಾರಿ ಮತ್ತು ವಿಮೆ ಕ್ಲೇಮ್ ಆಗುತ್ತಿಲ್ಲ ಎಂದು ಯಲಹಂಕ ಪೊಲೀಸರು ತಿಳಿಸಿದ್ದಾರೆ. ಕಾರುಗಳು ಮಾಲೀಕರಿಗೆ ತ್ವರಿತವಾಗಿ ವಿಮೆ ಕ್ಲೇಮ್ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ವಿಮಾ ಕಂಪನಿಗಳು ಹಾಗೂ ಸಾರಿಗೆ ಇಲಾಖೆ ಮತ್ತು ಪೊಲೀಸರ ಸಹಯೋಗದಲ್ಲಿ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos