ಮೋದಿ ರ್ಯಾಲಿಗೆ ಭಾಗವಹಿಸಿದವರು ಪಾಕಿಸ್ತಾನಿ ಬೆಂಬಲಿಗರೆಂದು ವಿವಾದ ಸೃಷ್ಟಿಸಿದ ಕೇಂದ್ರ ಸಚಿವ

ಮೋದಿ ರ್ಯಾಲಿಗೆ ಭಾಗವಹಿಸಿದವರು ಪಾಕಿಸ್ತಾನಿ ಬೆಂಬಲಿಗರೆಂದು ವಿವಾದ ಸೃಷ್ಟಿಸಿದ ಕೇಂದ್ರ ಸಚಿವ

ಬಿಹಾರ, ಮಾ.5, ನ್ಯೂಸ್ ಎಕ್ಸ್ ಪ್ರೆಸ್: ಪ್ರಧಾನಿ ರ್ಯಾಲಿಗೆ ಬಾರದವರು ಪಾಕಿಸ್ತಾನದ ಬೆಂಬಲಿಗರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಈಗ ದೇಶದ ಜನತೆ ಹಾಗೂ ಪ್ರತಿಪಕ್ಷಗಳ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.

ಮಾರ್ಚ್ 3ರಂದು ಬಿಹಾರದಲ್ಲಿ ಪ್ರಧಾನಿಯವರ ರ್ಯಾಲಿ ಆಯೋಜನೆಗೊಂಡಿತ್ತು. ಈ ಮುನ್ನ ಮಾಧ್ಯಮಗಳಿಗೆ ಮಾತನಾಡಿದ್ದ ಗಿರಿರಾಜ್ ಸಿಂಗ್, ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆದರೆ ಬಳಿಕ ಅವರೇ ಗೈರು ಹಾಜರಾಗಿದ್ದರು. ಇದೀಗ ಎದುರಾಳಿ ಪಕ್ಷದ ನಾಯಕರು ಗಿರಿರಾಜ್ ಸಿಂಗ್ ಹಾಗೂ ಬಿಜೆಪಿ ವಿರುದ್ಧ ಟೀಕೆ ಮಾಡಲಾರಂಭಿಸಿದ್ದಾರೆ.

ಈ ವಿಚಾರದಲ್ಲಿ ಖುದ್ದು ಗಿರಿರಾಜ್ ಸಿಂಗ್ ಅವರೇ ಸುಳ್ಳು ಹೇಳಿ ಮುಗ್ಗರಿಸಿದ್ದಾರೆ. ಅವರು ಯಾವಾಗ ಪಾಕಿಸ್ತಾನಕ್ಕೆ ವೀಸಾ ಮಾಡಿಸಲಿದ್ದಾರೆ ಎಂದು ಬಿಹಾರ ಶಾಸಕ ಪಪ್ಪು ಯಾದವ್ ಟ್ವಿಟರ್ ನಲ್ಲಿ ಕುಟುಕಿದ್ದಾರೆ.

ಹಿರಿಯ ನಾಯಕ ವಿಜಯ್ ಪ್ರಕಾಶ್ ಪ್ರತಿಕ್ರಿಯೆ ನೀಡಿ, ಗಿರಿರಾಜ್ ಅವರ ಹೇಳಿಕೆ ರಾಷ್ಟ್ರವಿರೋಧಿ ಎಂದಿದ್ದಾರೆ. ಬಿಹಾರದ ಜನ ರ್ಯಾಲಿಯನ್ನು ತಿರಸ್ಕರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಆರ್.ಎಲ್.ಎಸ್.ಪಿ. ನಾಯಕ ಫಜಲ್ ಮಲ್ಲಿಕ್ ಮಾತನಾಡಿ ಈಗ ಯಾರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕೆಂದು ಗಿರಿರಾಜ್ ಹೇಳಲಿ ಎಂದು ಸವಾಲು ಹಾಕಿದ್ದಾರೆ ಜತೆಗೆ ದೇಶದ ಕ್ಷಮೆ ಯಾಚಿಸುವಂತೆ ಅವರು ಒತ್ತಾಯಿಸಿದ್ದಾರೆ. ಇಷ್ಟೆಲ್ಲ ಟೀಕೆಗಳ ನಡುವೆ ಬಿಜೆಪಿ ಪ್ರತಿಕ್ರಿಯಿಸಿ ಹೇಳಿಕೆಯನ್ನು ತಿರುಚಲಾಗಿದೆ ಎಂದಿದೆ. ಜೆಡಿಯು ಈ ವಿಚಾರದಿಂದ ಅಂತರ ಕಾಯ್ದುಕೊಂಡಿದೆ.

ಫ್ರೆಶ್ ನ್ಯೂಸ್

Latest Posts

Featured Videos