ಅಭಿನಂದನ್ ವೈದ್ಯಕೀಯ ಫಿಟ್ನೆಸ್ ಆಧರಿಸಿ ಕರ್ತವ್ಯಕ್ಕೆ ಮರು ಸೇರ್ಪಡೆ: ಏರ್ ಚೀಫ್ ಮಾರ್ಷಲ್

ಅಭಿನಂದನ್ ವೈದ್ಯಕೀಯ ಫಿಟ್ನೆಸ್ ಆಧರಿಸಿ ಕರ್ತವ್ಯಕ್ಕೆ ಮರು ಸೇರ್ಪಡೆ: ಏರ್ ಚೀಫ್ ಮಾರ್ಷಲ್

ಕೊಯಮತ್ತೂರು, 4, ನ್ಯೂಸ್ಎಕ್ಸ್ ಪ್ರೆಸ್‍:  ಪಾಕಿಸ್ತಾನದ ವಶದಿಂದ ಬಿಡುಗಡೆಯಾಗಿ ಬಂದಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ವೈದ್ಯಕೀಯವಾಗಿ ಸಮರ್ಥರಾದ ಬಳಿಕ ಮತ್ತೆ ಯುದ್ಧ ವಿಮಾನದಲ್ಲಿ ಕರ್ತವ್ಯಕ್ಕೆ ಮರಳುವರೆ, ಇಲ್ಲವೆ ಎಂಬುದನ್ನು ನಿರ್ಧರಿಸಲಾಗುವುದು ಎಂದು ವಾಯುಪಡೆ ಮುಖ್ಯಸ್ಥ ಏರ್‌ಚೀಫ್‌ ಮಾರ್ಷಲ್‌ ಬಿ.ಎಸ್ ಧನೋವಾ ಸ್ಪಷ್ಟಪಡಿಸಿದ್ದಾರೆ.

ಅಭಿನಂದನ್ ಅವರು ಸುಲೂರ್ ವಾಯುನೆಲೆ ಆಸ್ಪತ್ರೆಯಲ್ಲಿ ಪ್ರಸ್ತುತ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಿದ್ದಾರೆ. ಬಳಿಕ ಅವರಿಗೆ ಅಗತ್ಯವಿರುವ ಚಿಕಿತ್ಸೆ ನೀಡಲಾಗುವುದು ಎಂದು ಧನೋವಾ ತಿಳಿಸಿದರು.

ಯುದ್ಧ ವಿಮಾನದಲ್ಲಿ ಮತ್ತೆ ಹಾರಾಡುವಷ್ಟು ಸಶಕ್ತರು ಎಂದು ಕಂಡು ಬಂದರೆ ಪುನಃ ಅವರನ್ನು ಸ್ಕ್ವಾಡ್ರನ್‌ಗೆ ಸೇರಿಸಿಕೊಳ್ಳಲಾಗುವುದು. ಒಂದು ವೇಳೆ ಅವರು ಸಶಕ್ತರಲ್ಲ ಎಂದಾದರೆ, ಸಂಪೂರ್ಣ ಸಮರ್ಥರಾದ ಬಳಿಕ ಮತ್ತೆ ಸೇರಿಸಿಕೊಳ್ಳಲಾಗುವುದು’ ಎಂದು ಧನೋವಾ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತ ತಿಳಿಸಿದರು.

ಪಾಕಿಸ್ತಾನದ ವಶದಿಂದ ಬಿಡುಗಡೆಯಾಗಿ ಬಂದ ಬಳಿಕ ಮಿಲಿಟರಿ ಆಸ್ಪತ್ರೆಗೆ ದಾಖಲಾಗಿರುವ ಅಭಿನಂದನ್, ಹಿರಿಯ ಅಧಿಕಾರಿಗಳ ಮುಂದೆ ಆದಷ್ಟು ಬೇಗನೆ ಯುದ್ಧ ವಿಮಾನದ ಪೈಲಟ್ ಆಗಿ ಕರ್ತವ್ಯಕ್ಕೆ ಮರಳುವ ಬಯಕೆ ವ್ಯಕ್ತಪಡಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos