ಧೋನಿ ಪಂಚ್ ಗೆ ರಿಶಭ್ ಪಂತ್ ಔಟ್..!

  • In Sports
  • March 1, 2019
  • 268 Views
ಧೋನಿ ಪಂಚ್ ಗೆ ರಿಶಭ್ ಪಂತ್ ಔಟ್..!

ಮಾ,1.ನ್ಯೂಸ್‍ ಎಕ್ಸ್ ಪ್ರೆಸ್: ಮಿಲಿಯನ್ ಡಾಲರ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್​ಗೆ, ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಉಳಿದಿದೆ. ಆಗಲೇ ಆಟಗಾರರ ನಡುವೆ ಮೈಂಡ್​ಗೇಮ್, ಪ್ರಾರಂಬವಾಗಿದೆ. ಅದರಲ್ಲೂ ಭಾರತೀಯ ಆಟಗಾರರು, ಭಾರತೀಯರಿಗೇ ಚಾಲೆಂಜ್ ಮಾಡುತ್ತಿರುವುದು, ಎಲ್ಲರ ಹುಬ್ಬೇರುವಂತೆ ಮಾಡಿದೆ.ಹೌದು..! ಟೂರ್ನಿಗೂ ಮೊದಲು ನಡೆಯುತ್ತಿರುವ ಈ ಮಾತಿನ ಚಕಮಕಿ, ಅಭಿಮಾನಿಗಳಲ್ಲಿ ಕ್ರಿಕೆಟ್ನ ಜ್ವರ ಹೆಚ್ಚಿಸುತ್ತಿದೆ. ಹಾಗಂತ ಆಟಗಾರರ ನಡುವೆ ನಡೆಯುತ್ತಿರುವ ಸ್ಲೆಡ್ಜಿಂಗ್​, ಗಂಭೀರವೇನ್ನಲ್ಲ ಬಿಡಿ. ಐಪಿಎಲ್​ ಜಾಹಿರಾತುಗಳಿಗಾಗಿ ಶೂಟ್ ಮಾಡಿಸಿರುವ ಆ್ಯಡ್​ನಲ್ಲಿ, ಡೆಲ್ಲಿ ಕ್ಯಾಪಿಟಲ್ಸ್​ನ ಯಂಗ್ ಆ್ಯಡ್​ ಡೈನಾಮಿಕ್ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ರಿಶಭ್ ಪಂತ್, ಚೆನ್ನೈ ಸೂಪರ್​ಕಿಂಗ್ಸ್​ನ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯನ್ನ ಕೆಣಕುವ ಪ್ರಯತ್ನ ನಡೆಸಿದ್ದಾರೆ. ಆದರೆ ಧೋನಿ, ಪಂತ್​ಗೆ ತನ್ನದೇ ಸ್ಟೈಲ್​ನಲ್ಲಿ ಉತ್ತರಿಸಿದ್ದಾರೆ. ” ಮೊದ ಮೊದಲು ಫೀಲ್ಡ್​ಗೆ ಎಂಟ್ರಿ ಕೊಟ್ಟ ನಾನು, ನಿನ್ನ ಹಾಗೇ ಯೋಚಿಸುತ್ತಿದ್ದೆ. ಬಾ ರಿಶಭ್, ವಿಕೆಟ್ ಹಿಂದೆ ಇರೋದೇ ನಾನು” ಅಂತ ಪಂತ್​ಗೆ, ಪಂಚ್ ಕೊಟ್ಟು ಮತ್ತಷ್ಟು ಕಿಕ್ ಏರಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos