ಸಾಕ್ಷಿ ಮಲಿಕ್ ಡಾನ್ ಕೋಲೋವ್ 2019ರ ಕುಸ್ತಿ; ಫೈನಲ್

ಸಾಕ್ಷಿ ಮಲಿಕ್ ಡಾನ್ ಕೋಲೋವ್ 2019ರ ಕುಸ್ತಿ; ಫೈನಲ್

ಮಾ,1.ನ್ಯೂಸ್‍ ಎಕ್ಸ್ ಪ್ರೆಸ್: ಒಲಿಂಪಿಕ್ ನಲ್ಲಿ ಕಂಚಿನ ಪದಕವನ್ನು  ಗೆದ್ದ ಸಾಕ್ಷಿ ಮಲಿಕ್ ಅವರು ಬಲ್ಗೇರಿಯಾದ ರೂಸ್ನಲ್ಲಿ ನಡೆದ ಡಾನ್ ಕೋಲೋವ್ 2019ರ 65 ಕೆ.ಜಿ ವಿಭಾಗದ ಫ್ರೀಸ್ಟೈಲ್ ಕುಸ್ತಿ ಪಂದ್ಯದಲ್ಲಿ ಫಿನ್ಲೆಂಡ್​ನ ವಿಶ್ವ ಚಾಂಪಿಯನ್ ಪೆಟ್ರಾ ಒಲ್ಲಿ ಅವರನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದಾರೆ. ಸೆಮಿ-ಫೈನಲ್‌ನಲ್ಲಿ ಸಾಕ್ಷಿ ಅವರು, ಒಲ್ಲಿ ಅವರನ್ನು 4-1 ಗೋಲುಗಳಿಂದ ಸೋಲಿಸಿದರು. 2016ರ ರಿಯೊ ಒಲಿಂಪಿಕ್​ನಲ್ಲಿ ಕಂಚಿನ ಪದಕ ಗೆದ್ದ ಸಾಕ್ಷಿ ಈಗ ಚಿನ್ನದ ಪದಕಕ್ಕಾಗಿ ಫೈನಲ್​ ಪಂದ್ಯದಲ್ಲಿ ಸ್ವೀಡನ್​ನ ಹೆನ್ನಾ ಜಾನ್ಸನ್ ರವರನ್ನು ಎದುರಿಸಲಿದ್ದಾರೆ. 2020ರ ಟೋಕಿಯೊ ಒಲಿಂಪಿಕ್​ನ ಸ್ಪರ್ಧೆಗೆ ಪ್ರತಿನಿಧಿಸಲು ನಾನು ಹೆಚ್ಚಿನ ಪರಿಶ್ರಮದ ಮೂಲಕ, ಮತ್ತೊಂದು ಒಲಿಂಪಿಕ್ ಪದಕವನ್ನು ಗೆಲ್ಲುವುದು ನನ್ನ ಕನಸು ಮತ್ತು ನಾನು ಅದನ್ನು ಸಂಪೂರ್ಣವಾಗಿ ಕೇಂದ್ರೀಕರಿಸಿದ್ದೇನೆ ಅಂತಾ ಸಾಕ್ಷಿ ಮಲಿಕ್​ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos