ಬೊಮ್ಮನಹಳ್ಳಿ, ನ್ಯೂಸ್ ಎಕ್ಸ್ ಪ್ರೆಸ್, ಫೆ.27: ಮತ್ತೊಮ್ಮೆ “ಮೋದಿ” ಎಂಬ ಕೂಗು ಜನರಲ್ಲಿ ಮೂಡಿಸಲು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಸತೀಶ್ ರೆಡ್ಡಿಯವರ ನೇತೃತ್ವದಲ್ಲಿ ಇಂದು ಸಂಜೆ ನಡೆದ “ಕಮಲ ಜ್ಯೋತಿ” ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸತೀಶ್ ರೆಡ್ಡಿ ಅವರು, 70 ವರ್ಷಗಳ ಕಾಲ ದೇಶವನ್ನು ಕಾಂಗ್ರೆಸ್ ಅಭಿವೃದ್ಧಿಗೊಳಿಸದೆ ಜನತೆಯನ್ನು ಬಡತನದ ಬೇಗೆಯಲ್ಲೇ
ಮುಳುಗಿಸಿತು. ಆದರೆ, ನರೇಂದ್ರ ಮೋದಿಯವರು ಪ್ರಧಾನಿಯಾದ ಕೇವಲ 5 ವರ್ಷಗಳಲ್ಲಿಯೇ ಜನರ ಮೆಚ್ಚುಗೆಯ ಆಡಳಿತವನ್ನು ನಡೆಸಿ ಜನಪ್ರಿಯರಾದರು ಎಂದು ಮೋದಿ ಅವರನ್ನು ಶ್ಲಾಘಿಸಿದ್ದಾರೆ.
ಬಡ ಹಿಂದುಳಿದ ವರ್ಗದವರಿಗೆ ಹಲವಾರು ಯೋಜನೆಗಳನ್ನು ರೂಪಿಸಿ ಈಗಾಗಲೇ ಕೇಂದ್ರ ಸರ್ಕಾರದಲ್ಲಿ ತಮ್ಮದೇ ಆದಂತಹ ಜನಪ್ರಿಯತೆಯನ್ನು ಕಂಡ ನಾಯಕ. ಇತ್ತೀಚೆಗೆ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ 40 ಸೈನಿಕರು ಮೃತಪಟ್ಟಾಗ ಮೋದಿಯವರು ಪ್ರತೀಕಾರದ ಮಾತನ್ನು ಆಡಿದ್ದರು. ನುಡಿದಂತೆ ಇಂದು ಉಗ್ರರ ನೆಲೆಯ ಮೇಲೆ ವಾಯುಪಡೆ ದಾಳಿ ನಡೆಸಿ ದೇಶದ ಹೆಮ್ಮೆಯ ಮಗನೆನೆಸಿದ್ದಾರೆಂದು ಸತೀಶ್ ರೆಡ್ಡಿ ಹೇಳಿದ್ದಾರೆ.
ಇನ್ನೇನು ಕೆಲವೇ ದಿನದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400ಕ್ಕೂ ಅಧಿಕ ಸ್ಥಾನಗಳನ್ನು ಪಡೆದು ಮತ್ತೊಮ್ಮೆ “ಮೋದಿ” ಸರ್ಕಾರ ರಚಿಸಲಿದ್ದಾರೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯರಾದ ಗುರುಮೂರ್ತಿರೆಡ್ಡಿ, ಬಿಜೆಪಿ ಮಹಿಳಾ ಮುಂಖಡರಾದ ಕಮಲದ ರಂಗೋಲಿಯನ್ನಾಕಿ ದೀಪ ಬೆಳಗಿಸಿ ಕಮಲ ಜ್ಯೋತಿ ಕಾರ್ಯಕ್ರಮವನ್ನಾಚರಿಸಿದರು.