ಬೆಂಗಳೂರು, ನ್ಯೂಸ್ ಎಕ್ಸ್ ಪ್ರೆಸ್, ಫೆ.27: ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಫ್ಲಾಟ್‌ಫಾರಂನಲ್ಲಿ ಬೆಳಗಿನ ಜಾವ ಮೂವರು ಮಹಿಳೆಯರನ್ನು ತಂಡವೊಂದು ಅಡ್ಡಹಾಕಿ ದರೋಡೆ ಮಾಡಿದ ಘಟನೆ ನಡೆದಿದೆ.
ಇಂದು ಬೆಳಗ್ಗೆ
5:30ರ ಸುಮಾರಿಗೆ ಘಟನೆ ನಡೆದಿದೆ. ಕೇಂದ್ರ ಸರ್ಕಾರದ ಉದ್ಯೋಗಿ ಸುಮನಾ ರಾಯ್ ಎಂಬುವವರು ದೂರು ನೀಡಿದ್ದಾರೆ.
ಚೆನ್ನೈಗೆ ತೆರಳುವ ಸಂಬಂಧ ತಾಯಿ ಮತ್ತು ಚಿಕ್ಕಮ್ಮನ ಜೊತೆ ರೈಲು ನಿಲ್ದಾಣಕ್ಕೆ ಬಂದು ಶತಾಬ್ಧಿ ಎಕ್ಸ್‌ಪ್ರೆಸ್
ರೈಲಿಗಾಗಿ ಕಾಯುತ್ತಿದ್ದರು.
ಈ ವೇಳೆ ನಾಲ್ವರು
ಮಹಿಳೆಯರು ಮತ್ತು ಒಬ್ಬ ಪುರುಷ ಇದ್ದ ಐದು ಮಂದಿಯ ಗ್ಯಾಂಗ್ ಇವರನ್ನು ಸುತ್ತುವರೆದು ದರೋಡೆ ನಡೆಸಿದೆ.
ರಾಯ್ ಅವರ ಬಳಿ ಇದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಅದರಲ್ಲಿ ಎರಡು ಚಿನ್ನದ ಬಳೆಗಳು
50 ಸಾವಿರ ನಗದು, ಮೊಬೈಲ್ , ಆಧಾರ್ ಕಾರ್ಡ್ ಸೇರಿ ವಿವಿಧ ದಾಖಲೆಗಳಿದ್ದವು.
ಎಲ್ಲ ಸೇರಿ
1.65 ಲಕ್ಷ ರೂ ಮೌಲ್ಯದ ವಸ್ತುಗಳನ್ನು ದರೋಡೆ ಮಾಡಿದ್ದಾರೆ ಎಂದು ರಾಯ್ ತಿಳಿಸಿದ್ದಾರೆ. ಸಿಸಿಟಿವಿ
ದೃಶ್ಯದಲ್ಲಿ ದರೋಡೆ ಕೋರರ ಸುಳಿವು ಸಿಕ್ಕಿದೆ. ಅವರನ್ನು ಸದ್ಯದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು
ತಿಳಿಸಿದ್ದಾರೆ.