ಸಿನಿಮಾಗೆ ಬಂತು ದರ್ಶನ್ ರವರ ಹಸು

ಸಿನಿಮಾಗೆ ಬಂತು ದರ್ಶನ್ ರವರ  ಹಸು

ದರ್ಶನ್ ಅಭಿನಯದ ಯಜಮಾನ ಚಿತ್ರದಲ್ಲಿ ಸ್ಟಾರ್ ಕಲಾವಿದರಂತೆ ಗೋವುಗಳದ್ದು ಪ್ರಮುಖ ಪಾತ್ರವಿದೆ. ಯಜಮಾನ ಚಿತ್ರದಲ್ಲಿ 4 ಗೂಳಿಗಳಿರುವ ಪೋಸ್ಟರ್ ಜನರಿಗೆ ಭಾರಿ ಗಮನ ಸೆಳೆದಿತ್ತು. ಇದೀಗ, ಇನ್ನೊಂದು ಗಮನಾರ್ಹ ವಿಷಯ ಬಹಿರಂಗವಾಗಿದೆ.

ಟ್ರೈಲರ್ ನಲ್ಲಿ ದರ್ಶನ್ ಜೊತೆ ಕಾಣಿಸುವ ಗೋವು ಸ್ವಂತ ದರ್ಶನ್ ಅವರದ್ದೆ ಅಂತೆ. ಇದನ್ನ ಖುದ್ದು ದರ್ಶನ್ ಅವರೇ ಹೇಳಿದ್ದಾರೆ. ಈ ಗೂಳಿಯ ಹೆಸರು ಭೀಮ ಅಂತ ಕೂಡ ಡಿ.ಬಾಸ್ ತಿಳಿಸಿದ್ದಾರೆ.

ಡಿ.ಬಾಸ್ ಮೊದಲೇ ಪ್ರಾಣಿಪ್ರಿಯರು. ಮೈಸೂರಿನಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ಬಹುತೇಕ ಎಲ್ಲಾ ರೀತಿಯ ಪ್ರಾಣಿಗಳನ್ನ ಸಾಕುತ್ತಿದ್ದಾರೆ. ಅವಶ್ಯಕತೆ ಇದ್ದಾಗ ತಮ್ಮ ಸಿನಿಮಾಗಳಲ್ಲಿ ಡಿ.ಬಾಸ್ ಸಾಕಿರುವ ಪ್ರಾಣಿಗಳನ್ನು ಕೂಡ ಪರದೆಯ ಮೇಲೆ
ಬರಮಾಡಿ ಕೊಂಡಿದ್ದಾರೆ. ಈ ಹಿಂದೆ ಸಾರಥಿ ಸೇರಿದಂತೆ ಹಲವು ಚಿತ್ರಗಳಲ್ಲಿ ತಮ್ಮ ಕುದುರೆಯನ್ನ ಬಳಸಿಕೊಂಡಿದ್ದರು. ಇದೀಗ, ಯಜಮಾನ ಚಿತ್ರದಲ್ಲಿ
ತಮ್ಮದೇ  ಆದಾ ಗೋವು ಕೂಡ ನಟಿಸಿದೆ.

ಇದರ ಜೊತೆಗೆ ತಮಿಳುನಾಡಿನ ಜಲ್ಲಿಕಟ್ಟಿನಲ್ಲಿ ಭಾಗವಹಿಸುವ ಕೆಲವು ಗೂಳಿಗಳನ್ನ ಕೂಡ ಬಳಸಲಾಗಿದೆಯಂತೆ. ಅದನ್ನ ಚಿತ್ರದಲ್ಲೇ ನೋಡಬೇಕಿದೆ. ಮಾರ್ಚ್ 1 ರಂದು ಯಜಮಾನ ತೆರೆಗೆ ಬರ್ತಿದ್ದು, ಮತ್ತಷ್ಟು ಸರ್ಪ್ರೈಸ್ ಅಲ್ಲಿ ಸಿಗಲಿದೆ.

ಪ್ರಾಣಿಗಳಿಗೂ ಒಂದು ಪಾತ್ರ ಮಾಡಿಸುತ್ತಾರೆ.

ಫ್ರೆಶ್ ನ್ಯೂಸ್

Latest Posts

Featured Videos