ಚಿಕ್ಕಮಗಳೂರು: ರಾಜ್ಯದಲ್ಲಿ ಈಗಾಗಲೇ ಜಾತಿಜನಗಣತಿ ಮಾಡಿದ್ದರು ಕೂಡ ಮತ್ತೊಮ್ಮೆ ಇದೀಗ ಜಾತಿಜನಗಣತಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ಇನ್ನು ಮತ್ತೊಮ್ಮೆ ಜಾತಿಜನಗಣತಿಯನ್ನು ಮಾಡಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕರು ಆಕ್ರೋಶ ಹೊರ ಹಾಕುತ್ತಿದ್ದಾರೆ. ದುಡ್ಡು ಹೊಡಿಯೋಕೆ ಜಾತಿಜನಗಣತಿಯಂತಹ ಸ್ಕೀಮ್ ಹುಡುಕುತ್ತೀರಾ? ಎಂದು ಸಿಟಿ ರವಿ ಅವರು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಈ ಕುರಿತು ಚಿಕ್ಕಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮನೆ ಮನೆಗೂ ಹೋಗಿ ಸಮೀಕ್ಷೆ ನಡೆಸಿ ‘ಅಕ್ಯೂರೇಟ್ ಸಮೀಕ್ಷೆ’ ಎಂದಿದ್ದರೂ ಈಗ ಕಾಂತರಾಜು ವರದಿಯನ್ನು ತಿಪ್ಪೆಗೆ ಹಾಕಲಾಗಿದೆ ಎಂದು ಟೀಕಿಸಿದರು.
ಯಾರ ಮನೆ ದುಡ್ಡು? ನಿಮ್ಮ ಮನೆಯದ್ದಾ? ನಿಮ್ಮ ಫಾದರ್ ಮನೆಯದ್ದಾ? ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ ರವಿ, ಕೇಂದ್ರ ಸರ್ಕಾರವೇ ಜಾತಿ ಮತ್ತು ಜನಗಣತಿ ಎರಡನ್ನೂ ನಡೆಸುತ್ತಿದೆ. ಹೀಗಿರುವಾಗ ನಮ್ಮದು ಶೈಕ್ಷಣಿಕ ಸಮೀಕ್ಷೆ ಎಂದು ಹೇಳುವ ಲಾಜಿಕ್ ಏನು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕೆಡಿ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಿಚ್ಚ!?
ಅಲ್ಲದೇ, ಶೈಕ್ಷಣಿಕ ಸಮೀಕ್ಷೆಯ ಹೆಸರಿನಲ್ಲಿ ಹೊಸ ಕಾಲಂಗಳನ್ನು ಸೇರಿಸಲಾಗಿದೆ ಎಂದು ಅವರು ಆರೋಪಿಸಿದರು. “ಬ್ರಾಹ್ಮಣ-ಕ್ರಿಶ್ಚಿಯನ್, ಒಕ್ಕಲಿಗ-ಕ್ರಿಶ್ಚಿಯನ್, ಬಿಲ್ಲವ-ಕ್ರಿಶ್ಚಿಯನ್ ಅಂತ ಸೇರಿಸಿದ್ದೀರಾ. ಆದರೆ, ಮುಸ್ಲಿಂ-ಕ್ರಿಶ್ಚಿಯನ್ ಅನ್ನೋ ವರ್ಗವನ್ನು ಸೇರಿಸಿಲ್ಲ. ಈ ರೀತಿಯಾಗಿ ಮಾಡಲು ನಿಮಗೆ ಅಧಿಕಾರ ಕೊಟ್ಟಿದ್ದು ಯಾರು?” ಎಂದು ಸಿ.ಟಿ. ರವಿ ಪ್ರಶ್ನಿಸಿದರು.