ಬೆಂಗಳೂರು: ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ವಿಪರೀತವಾಗಿ ಮಳೆಯಾಗುತ್ತಿರುವುದರಿಂದ ಬೆಂಗಳೂರು ನಗರದಲ್ಲಿ ಮಳೆಯಿಂದ ಹಲವಾರು ಅನಾಹುತಗಳಾಗಿವೆ. ವಿಪರೀತ ಮಳೆಯಿಂದಾಗಿ ಬೆಂಗಳೂರು ನಗರದ ರಸ್ತೆಗಳೆಲ್ಲ ನೀರು ತುಂಬಿದ ಕೆರೆಗಳಂತಾಗಿದ್ದು ವಾಹನ ಸವಾರರು ಮತ್ತು ಪಾದಾಚಾರಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು, ಬಿಟ್ಟುಬಿಡದೆ ಸುರಿಯುತ್ತಿರುವ ಮಳೆರಾಯನ ಆರ್ಭಟಕ್ಕೆ ಬೆಂಗಳೂರು ಮಂದಿ ಫುಲ್ ಕಂಗಾಲಾಗಿದ್ದಾರೆ. ಮೊದಲೇ ಮಳೆ ಬಂತಂದರೆ ಸಾಕು ಬೆಂಗಳೂರು ನಗರ ಕೆರೆಯಂತಾಗುತ್ತದೆ.
ಇದೀಗ ನಗರದ ಪ್ರತಿಷ್ಠಿತ ಏರಿಯಾಗಳಲ್ಲಿ ವಾಹನ ಸವಾರರು ಮತ್ತು ಪಾದಾಚಾರಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಮಳೆಯಿಂದಾಗಿ ರೋಡ್ ಗಳೆಲ್ಲಾ ಕೆರೆಯಂತಾಗಿದೆ.
ಯೆಸ್..ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಬೆಂಗಳೂರಿಗೆ ದೊಡ್ಡ ಮಳೆಯನ್ನೇ ಹೊತ್ತುತಂದಿದೆ. ಭಾನುವಾರ ಸಂಜೆಯಿಂದಲೂ ಶುರುವಾಗಿದ್ದ ಮಳೆ ಸೋಮವಾರ ಸಂಜೆವರೆಗೂ ಒಂದೇ ಸಮನೇ ಧಾರಾಕಾರವಾಗಿ ಸುರಿದಿದೆ. ಈ ವರುಣಾರ್ಭಟ ಬೆಂಗಳೂರಿನಲ್ಲಿ ಸೃಷ್ಟಿಸಿರೋ ಅವಾಂತರಗಳು ಒಂದೆರಡಲ್ಲ.